
ಬೀದರ:ಸೆ.10:ಜನಪದ ಕಲಾವಿರದ ಬಳಗ ಬೀದರ್ ವತಿಯಿಂದ ಕಳೆದ 5 ವರ್ಷಗಳಿಂದ ಸತತವಾಗಿ ಗ್ರಾಮೀಣ ಕ್ರೀಡಾಕೂಟ, ಜನಪದ, ಬಯಲಾಟ, ಮೊರಹಂ ಪದ, ತತ್ವಪದ, ಗೀಗಿಪದ, ಸೋಬಾನಪದ, ಕೋಲಾಟ, ಚರ್ಮವಾದ್ಯ, ಡೊಳ್ಳುಕುಣಿತ, ಸಂಗೀತ ಸೇರಿದಂತೆ ವಿವಿಧ ಪ್ರಕಾರದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಕ್ರೀಡಾಪಟುಗಳು, ಕಲಾವಿದರ ಶ್ರೆಯೋಭಿವೃದ್ದಿಗಾಗಿ ಹಾಗೂ ಕಲಾ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮವಹಿಸುತ್ತಾ ಬರುತ್ತಿದ್ದು, ಬೀದರ ಜಿಲ್ಲೆಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು ಕನ್ನಡ ಭಾಷೆ ಕಟ್ಟುವುದರ ಜೊತೆಗೆ ಕ್ರೀಡೆ ಕಲೆ ಸಂಸ್ಕøತಿಯನ್ನು ಕಟ್ಟಬೇಕಾಗಿದೆ. ಜನಪದ ಕಲಾವಿರದ ಬಳಗ ಬೀದರ್ ವತಿಯಿಂದ 2023-24ನೇ ಸಾಲಿನ ಬೀದರ್ ನಗರಲ್ಲಿ ರಾಜ್ಯಮಟ್ಟದ ಯುವಜನ ಉತ್ಸವ ಕಾರ್ಯಕ್ರಮಕ್ಕೆ ಕ್ರೀಡಾ ಇಲಾಖೆಯಿಂದ ಘೋಷಿಸಲ ಜನಪದ ಕಲಾವಿರದ ಬಳಗದ ಅಧ್ಯಕ್ಷರಾದ ವಿಜಯಕುಮರ್ ಸೋನಾರೆ ಅವರು ಬೆಂಗಳೂರಿನಲ್ಲಿ ಇಂದು ಕ್ರೀಡಾ ಸಚವರಾದ ಬಿ.ನಾಗೇಂದ್ರ ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.