
ದಾವಣಗೆರೆ.ಏ.೫ : ಹರಿಹರ ಸಪ್ತರ್ಷಿ ಯೋಗಧಾರ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಮಹಿಳೆಯರ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯನ್ನು ಹರಿಹರದ ಶ್ರೀ ಗುರು ಸಿದ್ದಾರೂಢ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಹರಿಹರ ಈಶ್ವರೀಯ ವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಶಿವದೇವಿ ಅಕ್ಕ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಎನ್ಎಸ್ಎಸ್ ಅನುಷ್ಠಾನ ಅಧಿಕಾರಿಗಳಾದ ಶ್ರೀಮತಿ ಡಾ. ಎಸ್. ಪೂರ್ಣಿಮಾ ಜೋಗಿ ,ಮಂಗಳೂರು ಯೆನೋಪೋಯ ಆಸ್ಪತ್ರೆಯ ವೈದ್ಯರಾದ ಯೋಗ ಶಿಕ್ಷಕಿ ಡಾ. ವಿದ್ಯಾ ಹಿರೇಮಠ್, ದಾವಣಗೆರೆ ಕ್ರೀಡಾ ಇಲಾಖೆ ಮತ್ತು ಯುವ ಸಬಲೀಕರಣ ಸಹಾಯಕ ನಿರ್ದೇಶಕರಾದ ಶ್ರೀಮತಿ ಎಂ.ಸುಚೇತ, ನೆಲವಿಗಿ, ಹುಬ್ಬಳ್ಳಿ ಆಯುರ್ವೇದ ವೈದ್ಯರಾದ ಡಾ. ಗೀತಾ, ದಾವಣಗೆರೆ ಮೆಡಿಕಲ್ ಡೈರೆಕ್ಟರ್ ಆದ ಶ್ರೀಮತಿ ಡಾ. ವಿಂದ್ಯಾ ಗಂಗಾಧರ್ ವರ್ಮ, ದಾವಣಗೆರೆ ನಿವೃತ್ತ ಪೊಲೀಸ್ ಅಧಿಕಾರಿಯಾದ ಶ್ರೀಮತಿ ಜೆ. ಸುಶೀಲ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.