ರಾಜ್ಯಮಟ್ಟದ ಮಕ್ಕಳ ತಜ್ಞರ ಸಮಾವೇಶ ಸಂಪನ್ನ ಪ್ರಮುಖ ನಿರ್ಣಯಗೊಂದಿಗೆ ಕಾರ್ಯೋನ್ಮೂಖವಾಗಲು ವೈದ್ಯರ ನಿರ್ಧಾರ.

ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ,6 :  ಮೂರುದಿನಗಳಿಂದ ನಡೆದ ರಾಜ್ಯಮಟ್ಟದ ಮಕ್ಕಳ ತಜ್ಞರ ಸಮಾವೇಶದಲ್ಲಿ ಮಕ್ಕಳ ಆರೋಗ್ಯದ ಸರ್ವತೋಮುಖ ಬೆಳವಣಿಗೆ ಅನುಸರಿಸುವ ಕ್ರಮಗಳ ಬಗ್ಗೆ ಪ್ರಮುಖ ಏಳು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾವೇಶದಲ್ಲಿ ಮಕ್ಕಳ ಬೆಳವಣಿಗೆಗೆ ಪ್ರಮುಖವಾಗಿ ರೋಗನಿರೋಧಕ ಶಕ್ತಯನ್ನು ವೃದ್ಧಿಸುವ ತಾಯಿಯ ಎದೆಹಾಲಿನ ಮಹತ್ವ ತಿಳಿಸುವುದು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಂತೆಯೇ ಎಲ್ಲಾ ಜಿಲ್ಲಾಕೇಂದ್ರದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರವನ್ನು ಒತ್ತಾಯಿಸುವುದು, ಬಾಲಸಂಜೀವಿನಿ ಮತ್ತು ಆಯುಷ್ಮಾನ ಭಾರತವನ್ನು ಅನುಷ್ಠಾನಕ್ಕೆ ತರುವುದು, ಕೋವಿಡ್ 3ನೇ ಅಲೆ ಮತ್ತು ಮಕ್ಕಳ ಮೇಲಾಗಬಹುದಾದದ ಪರಿಣಾಮಗಳ ಮಾಹಿತಿ ಹಂಚಿಕೆ, ಹೊರಗಿನ ಆಹಾರವನ್ನು ತೆಜೀಸಿ ಮನೆ ಆಹಾರಕ್ಕೆ ಒತ್ತುನೀಡುವುದು ಮತ್ತು ಪ್ರೋತ್ಸಾಹಿಸುವ ಕಾರ್ಯಕ್ರಮಕ್ಕೆ ಮುಂದಾಗುವುದು, ಮೊಬೈಲ್ ಬಳಕೆಯಿಂದಾಗುವ ಹಾನಿಗಳ ಬಗ್ಗೆ ತಿಳುವಳಿಕೆ ನೀಡುವುದು ರಕ್ಷಣಾವಿಧಾನಗಳನ್ನು ತಿಳಸಿಸುವುದು ಈ ಎಲ್ಲಾ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಡಾ.ಅಶೋಕ್ ದಾತಾರ್, ಡಾ.ರೂಪಾ ಬೆಲ್ಲದ್, ಡಾ.ಎಲ್.ಹೆಚ್ ಬಿದರಿ. ಡಾ.ಅಮರೇಶ್, ಡಾ.ರಾಜೀವ್‍ಗೆಜ್ಜೆ, ಡಾ.ಮಹಮ್ಮದ್ ಇಕ್ಬಾಲ್, ಲಲಿತ್‍ಜೈನ್ ಹಾಗೂ ಡಾ.ಮಟ್ಟಿ ಇನ್ನಿತರರಿದ್ದರು.