ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಟೂರ್ನಿಗೆ ಚಾಲನೆ

ದಾವಣಗೆರೆ.ನ.೨೨: ದೈಹಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ನಿರ್ಮಾಣದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ಮಹತ್ವ ಹೊಂದಿವೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷ ತಿಳಿಸಿದರು.ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಪಿಯು ಕಾಲೇಜುಗಳ ರಾಜ್ಯ ಮಟ್ಟದ ಬ್ಯಾಸ್ಕೆಟ್ ಬಾಲ್ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಿಯು ಹಂತದಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸದೃಡತೆಗೆ ಕ್ರೀಡೆ ಹೆಚ್ಚಿನ ಸಹಕಾರಿ ಎಂದರು.ಸದೃಢ ದೇಹದಲ್ಲಿ ಸದಾ ಸದೃಢ ಚಿಂತನೆ ಇರುತ್ತವೆ. ಅದಕ್ಕೆ ಪೂರಕವಾಗಿ ಸದೃಢ ದೇಹ, ಮಾನಸಿಕತೆಗೆ ಕ್ರೀಡೆಯಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.ಪಿಯು ಶಿಕ್ಷಣ ಮಂಡಳಿ ಉಪ ನಿರ್ದೇಶಕ ರಾದ ಎಂ. ಶಿವರಾಜ್, ಕರಿಸಿದ್ದಪ್ಪ, ಶಶಿಕಲಾ ಇಳಂಗೋವನ್, ಡಾ.‌ ಮಹಮ್ಮದ್ ಬುಡೇನ್, ಎನ್. ಶಂಕರಪ್ಪ ಇತರರು ಇದ್ದರು. 33 ಶೈಕ್ಷಣಿಕ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ