
ತಾಳಿಕೋಟೆ:ಫೆ.25: ತಾಳಿಕೋಟೆಯ ರಹವಾಸಿಯಾದ ಶ್ರೀಮತಿ ಕಮಲಾ.ಎಸ್.ಗೆಜ್ಜಿ (ಮುರಾಳ) ಇವರಿಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ದೊರೆತಿದ್ದರ ಕುರಿತು ತಾಳಿಕೋಟೆಯ ವೀರ ಶೈವ ವಿದ್ಯಾವರ್ದಕ ಸಂಘದ ವತಿಯಿಂದ ಕಮಲಾ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮತಿ ಕಮಲಾ.ಗೆಜ್ಜಿ (ಮುರಾಳ) ಅವರು ಇಗಾಗಲೆ ಕಪನಿಂಬರಗಿ ಎಂಬಲ್ಲಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಮಾತೆಯಾಗಿ ಸೇವೆ ಸಲ್ಲಿಸುತ್ತಿದ್ದು ಇತ್ತಿಚಿಗೆ ರಾಜ್ಯ ಮಟ್ಟದ 2023ರ ಶೈಕ್ಷಣಿಕ ಸಮ್ಮೇಳನದಲ್ಲಿ “ಸಾವಿತ್ರಿಬಾಯಿ ಫುಲೆ” ರಾಜ್ಯ ಮಟ್ಟದ “ಆದರ್ಶ ಶಿಕ್ಷಕಿ” ಪ್ರಶಸ್ತಿ ಪಡೆದ ನಿಮಿತ್ಯವಾಗಿ ತಾಳಿಕೋಟೆಯ ಶ್ರೀ ಖಾಸ್ಗತೇಶ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದ ವತಿಯಿಂದ ಹಾಗೂ ತಾಲೂಕ ಶರಣ ಸಾಹಿತ್ಯ ಪರಿಷತ್ತು ತಾಳಿಕೋಟೆ ಇವರ ಸಹಯೋಗದಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಭಯ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ವಿ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ, ಉಪಾಧ್ಯಕ್ಷ ಬಿ.ಎನ್.ಹಿಪ್ಪರಗಿ, ಕಾಂiÀರ್iದರ್ಶಿ ಎಮ್.ಎಸ್.ಸರಶೇಟ್ಟಿ, ದತ್ತಿ ದಾಸೋಹಿ ಕಾಶಿನಾಥ ಮೂರಾಳ, ಪ್ರಾಚಾರ್ಯರಾದ ಆರ್.ವಿ.ಜಾಲವಾದಿ, ಪರಿಷತ್ತಿನ ಕಾರ್ಯದರ್ಶಿ ಸಿ.ಬಿ.ತಿಳಗೊಳ, ಜಿ.ಎಸ್.ಜಮ್ಮಲದಿನ್ನಿ, ದತ್ತಿ ಸಂಚಾಲಕ ಈರಣ್ಣ ಕಲಬುರಗಿ, ವೇ||ವಸಂತ ಜೋಷಿ, ಹಾಗೂ ಕಾಶಿನಾಥ ಸಜ್ಜನ, ಶಂಕರಗೌಡ ಹಿಪ್ಪರಗಿ ಹಾಗೂ ಹುಣಸಗಿಯ ಬಿ.ಎಸ್.ಮೇಲಿನಮನಿ, ಮಲ್ಲಿಕಾರ್ಜುನ ಮುರಾಳ, ಅಶೋಕ ಜಾಲವಾದಿ ಮೊದಲಾದವರು ಉಪಸ್ಥಿತರಿದ್ದರು.