ರಾಜ್ಯಮಟ್ಟದ ಪವರ್ ಲಿಫ್ಟಿಂಗ್, ದಾವಣಗೆರೆಗೆ ಹಲವು ಪದಕ

ದಾವಣಗೆರೆ.ಏ.೫: ಹೊಸಪೇಟೆಯಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಾವಣಗೆರೆ ಕ್ರೀಡಾ ಪಟುಗಳು ಹಲವು ಪದಕಗಳನ್ನು ಪಡೆದು ದಾವಣಗೆರೆಗೆ ಕೀರ್ತಿ ತಂದಿದ್ಧಾರೆ.ಮಹಿಳೆಯರ ವಿಭಾಗದಲ್ಲಿ ಎ.ಕೆ.ಸಹನಾ ಅವರು ಕರ್ನಾಟಕ ಬಲಿಷ್ಠ ಮಹಿಳೆ ಟೈಟಲ್ ಪಡೆದು ದಾವಣಗೆರೆಗೆ ಕೀರ್ತಿ ತಂದಿದ್ದಾರೆ.ಅದೇ ರೀತಿ ಸಿ.ದಿವ್ಯಾ, ಭೂಮಿಕಾ, ಮಮತಾ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಕೆ.ಶಶಿಕಲಾ, ಕೆ.ವೈ.ಯಾಸ್ಮಿನ್, ಕೀರ್ತನಾ, ಧನುಶ್ರೀ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದಲ್ಲದೇ ಸುಮಾ ಅವರು ತೃತೀಯ ಸ್ಥಾನ ಪಡೆದಿದ್ದಾರೆ.ಪುರುಷರ ವಿಭಾಗದಲ್ಲಿ ಸಿ.ಫಕೃದ್ದೀನ್ ಅವರು ಕರ್ನಾಟಕ ಬಲಿಷ್ಠ ಪುರುಷ ಟೈಟಲ್ ಪಡೆದು ದಾವಣಗೆರೆಗೆ ಕೀರ್ತಿ ತಂದಿದ್ದಾರೆ. ಇದಲ್ಲದೇ ಸಿ.ಫಕೃದ್ದೀನ್, ಲಕ್ಷಿö್ಮÃಕಾಂತ್, ಶಂಕರ್ ಕಲಾಲ್, ಎ.ಚಂದ್ರಪ್ಪ ಹಾಗೂ ಜಕಣಾಚಾರಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಕೆ.ವೈ.ಶಶಿಧರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಬ್ ಜೂನಿಯರ್ ವಿಭಾಗದಲ್ಲಿ ಕೆ.ಎಸ್.ವಿನಾಯಕ ಪ್ರಥಮ, ಪಾರತೀಪಾ, ಎನ್.ವಿರೂಪಾಕ್ಷ ದ್ವಿತೀಯ ಹಾಗೂ ಬಿ.ಎಂ.ಸುಹಾಸ್ ದ್ವಿತೀಯ ಸ್ಥನ ಪಡೆದಿದ್ದಾರೆ.ಈ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಲಕ್ಷಿö್ಮÃದೇವಿ, ಕೆ.ವೈ.ಶಶಿಧರ್, ಸಿ.ಫಕೃದ್ದೀನ್, ಹನುಮಂತಪ್ಪ, ಹೆಚ್.ಚಂದ್ರಪ್ಪ, ಜಿ.ಗೋಪಾಲ್ ಕಾರ್ಯ ನಿರ್ವಹಿಸಿದ್ದರು.