ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆ

ದಾವಣಗೆರೆ.ಮಾ.೨೩: ಕರ್ನಾಟಕ ರಾಜ್ಯ ಪವರ್ ಲಿಫ್ಟರ್ಸ್ ಅಸೋಸಿಯೇಷನ್  ದಾವಣಗೆರೆ,ವಿಜಯನಗರ ಜಿಲ್ಲಾ ಪವರ್ ಲಿಫ್ಟರ್ಸ್ ಅಸೋಸಿಯೇಷನ್, ಹೊಸಪೇಟೆ, ಪ್ಲಾನೆಟ್ ೨.೦ ಗ್ರೂಪ್ಸ್ ಸಂಯುಕ್ತಾಶ್ರಯದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ನಿಮಿತ್ತ ಹೊಸಪೇಟೆಯ ಪಂಪ ಕಲಾಮಂದಿರದಲ್ಲಿ ಮಾ.೨೫ ಮತ್ತು ೨೬ ರಂದು ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಹಾಗೂ ಡೆಡ್ ಲಿಫ್ಟ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಲಕ್ಷ್ಮೀದೇವಿ ದಯಾನಂದ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರದ ಕ್ರೀಡಾಭಿಮಾನಿ, ಸಮಾಜ ಸೇವಕ ಸಿದ್ಧಿರ್ಥ್ ಸಿಂಗ್ ನೇತೃತ್ವದಲ್ಲಿ. ನಡೆಯಲಿದ್ದು, ಸ್ಪರ್ಧೆಗೆ ಮೈಸೂರು, ಬೆಂಗಳೂರು,ಸಿಂಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬೀದರ್, ಗುಲ್ಬರ್ಗ, ರಾಯಚೂರು, ವಿಜಯಪುರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಬಳ್ಳಾರಿ ಹಾಗೂ ಹೊಸಪೇಟೆಯಿಂದ ೩೦೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದರು.ಸ್ಪರ್ಧೆ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಮಾಸ್ಟರ್ ೧,೨,೩ ದೇಹ ತೂಕದ ಆಧಾರದ ಮೇಲೆ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ನಗದು ಬಹುಮಾನದ ಮೊತ್ತ ಒಟ್ಟು ೬, ೮೪,೦೦೦ ರೂಪಾಯಿಗಳಾಗಿದ್ದು, ಮಾ. ೨೬ ರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.ಹೆಚ್ಚಿನ ಮಾಹಿತಿಗೆ ಮೊ: ೮೧೨೩೨೫೭೫೧೨, ೭೯೯೬೩೨೧೫೭೪ ಸಂಪರ್ಕಿಸಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ, ಆರ್ಗನೈಸಿಂಗ್ ಸೆಕ್ರೇಟರಿ ಫಕೃದ್ದೀನ್, ಟೆಕ್ನಿಕಲ್ ಕಮಿಟಿ ಪ್ರೆಸಿಡೆಂಟ್ ಶಶಿಧರ್, ಹಾಗೂ ಸದಸ್ಯರಾದ ಗೋಪಾಲ್, ಲಕ್ಷ್ಮೀಕಾಂತ್, ಚಂದ್ರಪ್ಪ, ಮಾಯ ಇನ್ನಿತರರಿದ್ದರು.