
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೮; ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆಯೋಜಿಸಿದ್ದ ವೇಮನ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರಿನಲ್ಲಿ ನಡೆದಿರುವ ರಾಜ್ಯಮಟ್ಟದ “ದೇಹದಾರ್ಢ್ಯ” ಸ್ಫರ್ಧೆಯಲ್ಲಿ ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಯಾದ ದರ್ಶನ್ .ಆರ್. ಅವರು 65 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಈ ಕ್ರೀಡಾಪಟುವಿಗೆ ಕಾಲೇಜಿನ ನಿರ್ವಹಣಾ ಪ್ರತಿನಿಧಿಗಳಾದ ವೈ ಯು ಸುಭಾಶ್ಚಂದ್ರ, ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಮ್ ಬಿ, ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ ಕೆ. ಕೆ., ಹಾಗೂ ಕ್ರೀಡಾ ಸಂಯೋಜಕರಾದ ಡಾ. ಕಿರಣ್‌ಕುಮಾರ್ ಎಚ್ ಎಸ್, ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಅಜ್ಜಯ್ಯ ಜಿ ಬಿ ಮತ್ತು ಹನುಮಂತಪ್ಪ ವೈ ಇವರುಗಳು ಅಭಿನಂದಿಸಿದ್ದಾರೆ.