ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 21 ಚಿನ್ನದ ಪದಕ

Àಕಲಬುರಗಿ,ನ.9-ಕಳೆದ ಅಕ್ಟೋಬರ್ 31 ರಂದು ಮೈಸೂರಿನಲ್ಲಿ ನಡೆದ 18 ವರ್ಷದೊಳಗಿನ ಪ್ರಥಮ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ಮತ್ತು ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ತರಬೇತುದಾರರಾದ ಕಲಬುರಗಿಯ ಮನೋಹರ್ ಕುಮಾರ್ ಬೀರನೂರ ಅವರ 25 ವಿದ್ಯಾರ್ಥಿ/ನಿಯರು ಪಂದ್ಯಾವಳಿಯಲ್ಲಿ ಭಾಗವಹಿಸಿ 21 ಬಂಗಾರದ ಪದಕ, 8 ಬೆಳ್ಳಿಪದಕ, 6 ಕಂಚಿನ ಪದಕ, ಒಟ್ಟು 35 ಪದಕಗಳನ್ನು ಪಡೆಯುವುದರ ಮುಖಾಂತರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಭಾಗಕ್ಕೆ, ಕಲಬುರಗಿ ಜಿಲ್ಲೆಗೆ ಕೀರ್ತಿ ತಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಈ ಸಾಧನೆಗೆ ಕಲಬುರ್ಗಿ ದಕ್ಷಿಣ ಮತಕ್ಷೇತ್ರ ಶಾಸಕ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ವಿಧಾನಪರಿಷತ್ತಿನ ಸದಸ್ಯ ಶಶೀಲ್ ಜಿ ನಮೋಶಿ, ಮಾಜಿ ಸಚಿವÀ ಶರಣಪ್ರಕಾಶ್ ಪಾಟೀಲ್ ಸೇಡಂ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷÀ ನಿತಿನ್ ಗುತ್ತೇದಾರ್, ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಶರಣಕುಮಾರ ಮೋದಿ, ಕರಾಟೆ ಮುಖ್ಯ ಬೋಧಕರಾದ ದಶರಥ ಎಸ್ ದಮ್ಮನಸೂರು, ಕರವೇ ಉ-ಕ ಉಪಾಧ್ಯಕ್ಷರಾದ ರಾಜಶೇಖರ್ ಪಾಟೀಲ್ ದೇವದುರ್ಗ, ಕಾಂಗ್ರೇಸ ಮುಖಂಡರಾದ ಲಿಂಗರಾಜ ತಾರಪೈಲ, ಕರವೇ ಮುಖಂಡರಾದ ಗೋಪಾಲ ನಾಟೀಕರ, ಸಂತೋಷ ಚೌದರಿ, ದಿನೇಶ್ ನಾಯಕ್, ಮತ್ತು ಸಂಸ್ಥೆ ಪದಾಧಿಕಾರಿಗಳು ಮತ್ತು ಸಹ ತರಬೇತುದಾರರಾದ ವಿನೋದ್ ಕುಮಾರ್ ಹೊಸಮನಿ ಸಾಯಿಬಣ್ಣ ಅಲೋಳ್ಳಿ, ಸಂಕೇತ, ಶ್ರೀಕಾಂತ, ಅನಿಲ.ಹಾಗು ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಜನತೆ ಹರ್ಷ ವ್ಯಕ್ತ ಪಡಿಸಿದ್ದಾರೆ ಎಂದ ಸಂಸ್ಥೆಯ ಕಾರ್ಯದರ್ಶಿ ಗಜಾನನ ಬಿ ದೇವಿಕಾರ್ ತಿಳಿಸಿದಾರೆ.