ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಬಾಬುರಾವ ಕುಲಕರ್ಣಿ ಸನ್ಮಾನ

ವಿಜಯಪುರ, ಎ.21-ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಪ್ರತಿಭಾ ಸಾಹಿತ್ಯ ವೇದಿಕೆ 21ನೇ ವರ್ಷಾಚರಣೆ ಹಾಗೂ ಯುಗಾದಿಯ ಪ್ರಯುಕ್ತ ಜರುಗಿದ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಬಾಬುರಾವ ಕುಲಕರ್ಣಿ ಅವರ ನಮ್ಮ ಪಾಪದ ಫಲ ಕೊರೊನಾ ಎಂಬ ಕವನ ವಾಚನಕ್ಕಾಗಿ ಅವರನ್ನು ಸಂಘದ ಅಧ್ಯಕ್ಷ ಧರೆಪ್ಪ ತಿ. ಸಿದ್ನಾಥ (ಉಪ್ಪಣ್ಣಗಿ) ಅವರು ಶಾಲು ಹೊದಿಸಿ ಫಲಕ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ರೇ.ಸಿ.ಪಾಟೀಲ, ಸಾನಿಧ್ಯ ವಹಿಸಿದ್ದ ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜರು, ಮುಖ್ಯ ಅತಿಥಿಗಳಾಗಿದ್ದ ಹೊನವಾಡದ ವ್ಹಿ.ವ್ಹಿ.ಎಸ್.ಕಾಲೇಜದ ಪ್ರಾಚಾರ್ಯ ಎಸ್.ಜೆ.ಲಕ್ಕುಂಡಿಮಠ, ಗ್ರಾಮದ ಹಿರಿಯರಾದ ಶಿವಾಜಿ ಜಾಧವ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 40 ಜನ ಕವಿ, ಕವಿಯಿತ್ರಿಯರು ಭಾಗವಹಿಸಿದ್ದರು.