ರಾಜ್ಯಮಟ್ಟದ ಕರಾಟೆಯಲ್ಲಿ ವಿಜಯಪುರ ವಿದ್ಯಾರ್ಥಿಗಳ ಸಾಧನೆ

ವಿಜಯಪುರ, ಎ.21:ಗರುಡ ಕರಾಟೆ ಸಂಸ್ಥೆಯಿಂದ ದಾವಣಗೇರಿಯಲ್ಲಿ ಕಮ್ಮವಾರಿ ಸಮುದಾಯ ಭವನದಲ್ಲಿ ದಿನಾಂಕ 18-4-2021 ರಂದು 1ನೇ ಓSಏಂI ಸಂಸ್ಥೆ ಆಯೋಜಿಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಸ್ಕಾಯ ಸಂಸ್ಥೆಯಿಂದ ಕೆ.ಜಿ.ಎಸ್. ನಂ.1 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆಗೈದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅಬ್ದುಲ ಪೆಂಡಾರಿ ಪ್ರಥಮ ಸ್ಥಾನ (ಕಟಾ) ರಾಹುಲ ಜಾಧವ ಪ್ರಥಮ ಸ್ಥಾನ (ಫೈಟಿಂಗ್), ಕೀರ್ತನ ಕಿನ್ನೂರ ಪ್ರಥಮಸ್ಥಾನ (ಪೈಟಿಂಗ್) ರಾಹುಲ ಬಬಲೇಶ್ವರ ದ್ವಿತೀಯ ಸ್ಥಾನ (ಪೈಟಿಂಗ್) ಶಂಕರ ಹಿಪ್ಪರಗಿ ತೃತೀಯ (ಕಟಾ) ಸಂದೀಪ ಜಾಧವ ತೃತೀಯ (ಕಟಾ) ಬಾಬು ಪಡಗಾನೂರ ತೃತೀಯ (ಕಟಾ) ಅಹ್ಮದದಲಿ ಮುಲ್ಲಾ ತೃತೀಯ (ಕಟಾ) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ತರಬೇತಿದಾರ ಈರಪ್ಪ ಕುಂಚಿಕೊರವ ಹಾಗೂ ರಮೇಶ ಚವ್ಹಾಣ ಸ್ಕಾಯ ಸಂಸ್ಥೆ ಜಿಲ್ಲಾಧ್ಯಕ್ಷರು ವಿಜಯಕುಮಾರ ರಾಠೋಡ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.