ರಾಜ್ಯಮಟ್ಟದ ಕಬಡ್ಡಿಗೆ  ಚಿತ್ರದುರ್ಗ ಜಿಲ್ಲಾ ತಂಡ 

ಹಿರಿಯೂರು ನ.8– ಇದೇ ನವೆಂಬರ್ 11 ರಿಂದ 13 ರ ವರೆಗೆ ಬೆಂಗಳೂರಿನ ಆನೇಕಲ್ ಬಳಿ ಕರ್ನಾಟಕ ರಾಜ್ಯ ಮಟ್ಟದ ಜೂನಿಯರ್ ಕಬಡ್ಡಿ ಅಸೋಸಿಯೇಷನ್ ಕಪ್,2022, ನಡೆಯಲಿದ್ದು ಈ  ಪಂದ್ಯದಲ್ಲಿ ಭಾಗವಹಿಸಲು ಚಿತ್ರದುರ್ಗ ಜಿಲ್ಲಾ ತಂಡವನ್ನು ಕಳುಹಿಸುವ ಸಲುವಾಗಿ  ತರಬೇತಿ ಶಿಬಿರಕ್ಕೆ  ಚಿತ್ರದುರ್ಗ ಜಿಲ್ಲಾ ತಂಡವನ್ನು ಆಯ್ಕೆಮಾಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಅಮೆಚೂರ್ ಕಬಡ್ಡಿಅಸೋಸಿಯೇಷನ್ ಕಾರ್ಯದರ್ಶಿ ಎಂ ಪಿ ತಿಪ್ಪೇಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಆಯ್ಕೆಯಾದ ತಂಡದಲ್ಲಿಶಿವಪ್ರಸಾದ್, ಮಣಿಕಂಠ, ದರ್ಶನ್,ಕೆ,ಹೆಚ್.ಸಂಜಯ್,ಎ. ಚಿದಾನಂದ,ವಿವೇಕ,ತ್ರಿಮೂರ್ತಿ,ಹರ್ಷವರ್ಧನ್,ಮಂಜುನಾಥ್,ಕಿರಣ್, ಅಪ್ಪು,ಆರ್. ಅಭಿಷೇಕ್,ಮೋಹನ್,ಎಂ,ನರಸಿಂಹ ಮೂರ್ತಿ, ರಮೇಶ್, ಇವರುಗಳು ಚಿತ್ರದುರ್ಗ ಜಿಲ್ಲಾ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದು ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.