ರಾಜ್ಯಮಟ್ಟದ ಉಚಿತ “ಜೋಗುಳ ಹಾಡು” ಸ್ಪರ್ಧೆ 

ದಾವಣಗೆರೆ ಕಲಾ ಕುಂಚ ಸಾಂಸ್ಕೃತ ಸಂಸ್ಥೆಯ ಕೇರಳದ ಗಡಿನಾಡಿನ ಶಾಖೆಯ ಆಶ್ರಯದಲ್ಲಿ ಸೌರಮಾನ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ “ಜೋಗುಳ ಹಾಡು” ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಲಕುಂಚ ಕೇರಳ ಗಡಿನಾಡಿನ ಶಾಖೆ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ತಿಳಿಸಿದ್ದಾರೆ.ಸ್ಪರ್ಧಿಗಳು 12 ರಿಂದ 16 ಸಾಲುಗಳ ಮಿತಿಯಲ್ಲಿ ಒಬ್ಬರು ಒಂದೇ ಕವನ ರಚಿಸಿ ಕವನದ ಶೀರ್ಷಿಕೆಯೊಂದಿಗೆ ಪೂರ್ಣ ಪ್ರಮಾಣದ ಹೆಸರು ವಿಳಾಸ ಅಂತರ್ಜಾಲ ತಾಣದ ಸಂಖ್ಯೆ ವಾಟ್ಸಪ್ ಕನ್ನಡದಲ್ಲಿ ಬರೆದು 20-04-2023ರೊಳಗೆ ಈ ಕೆಳಗಿನ ಸನಿಹವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಆಂಗ್ಲ ಭಾಷೆಯಲ್ಲಿ ವಿಳಾಸವಿದ್ದರೆ ಕವನ ರದ್ದುಗೊಳಿಸಲಾಗುವುದು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಜೋಗುಳ ಹಾಡು ಒಂದು ಪರಂಪರೆ ಪುಟ್ಟ ಮಗುವಿನ ಏಕಾಗ್ರತಾ ಶಕ್ತಿ ಹೆಚ್ಚುತ್ತದೆ ಇತ್ತೀಚಿನ ದಿನಮಾನಗಳಲ್ಲಿ ಈ ಸಾಂಪ್ರದಾಯಿಕ ಪ್ರಕಾರಗಳು ನಶಿಸಿಹೋಗುವ ಕಾರಣ ಈ ಒಂದು ಪರಿಕಲ್ಪನೆಯಿಂದ ಈ ನಮ್ಮ ಸಂಪ್ರದಾಯ ಪದ್ಧತಿ ಪುನರಾವರ್ತನೆ ಆಗಲಿ ಎಂಬ ಸದುದ್ದೇಶದಿಂದ ಹಮ್ಮಿಕೊಳ್ಳಲಾದ ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗೆ 918289800677 ಈ ಸನಿಹವಾಣಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.