ರಾಜ್ಯಮಟ್ಟದ ಆದರ್ಶ ಗುರುವರ್ಯ ಪ್ರಶಸ್ತಿ ಪ್ರಕಟ

ಜೇವರ್ಗಿ :ನ.7:ರಾಜ್ಯ ಮಟ್ಟದ ಆದರ್ಶ ಗುರು ವರ್ಯ ಪ್ರಶಸ್ತಿಯ ಪಟ್ಟಿ ಬಿಡುಗಡೆಯಾಗಿದೆ ಎಂದು ನವ ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಕಾಲೇಜುಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಧನರಾಜ ರಾಠೋಡ ಮುತ್ತಕೋಡ ತಿಳಿಸಿದ್ದಾರೆ.
ಹಲವು ಮಾನದಂಡಗಳನ್ನು ಅನುಸರಿಸಿ ಆಯ್ಕೆ ಸಮಿತಿಯು ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕ,ಮುಖ್ಯ ಶಿಕ್ಷಕ ಹಾಗೂ ಉಪನ್ಯಾಸಕರುಗಳನ್ಮು ಅಂತಿಮವಾಗಿ ಆಯ್ಕೆ ಮಾಡಿ ಹರ್ಷ ವ್ಯಕ್ತ ಪಡಿಸಿದೆ..ಆಯ್ಕೆಯಾದ ಗುರು ವರ್ಯರುಗಳಿಗೆ ಪ್ರಶಸ್ತಿ ಪತ್ರ,ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರಮುಖ ಬೆಳೆಗಳ ಸಿರಿ ಧಾನ್ಯಗಳ ಕಿಟ್,ಚಿನ್ನ ಲೇಪಿತ ಪದಕ ಹಾಗೂ ನಗದು ಐದು ಸಾವಿರ ರೂಪಾಯಿ ಗುರು ಕಾಣಿಕೆ ಒಳಗೊಂಡಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಬಹು ವೈಶಿಷ್ಟ್ಯತೆಯಿಂದ ವಿನೂತನವಾಗಿ ಬಹು ಅದ್ದೂರಿಯಿಂದ ನಡೆಯಲಿದೆ.ಪ್ರಶಸ್ತಿ ಪ್ರಧಾನ ದಿನಾಂಕ ಹಾಗೂ ಸ್ಥಳ ಪ್ರಶಸ್ತಿ ವಿಜೇತ ಗುರುಗಳಿಗೆ ಅಂಚೆ ಮತ್ತು ದೂರವಾಣಿ ಮೂಲಕ ತಿಳಿಸಲಾಗುವುದು ಎಂದು ಧನರಾಜ ರಾಠೋಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಗುರುವರ್ಯರು
ವೆಂಕಟರಾವ್ ಮುಜುಮದಾರ ಜೇವರ್ಗಿ, ಯಲ್ಲುಬಾಯಿ ಲೋಕ್ರೆ ಜೇವರ್ಗಿ, ಸಿಸ್ಟರ್ ಲಿನೇಟ್ ಸಿಕ್ವೇರಾ ಶಹಾಬಾದ, ಕು.ರೂಪಾ ಶಂಕರರಾವ ಪಾಟೀಲ್ ಶಹಾಪೂರ, ಶ್ರೀಕಾಂತ್ ಪಾಟೀಲ್ ಕಲಬುರಗಿ, ಆಕಾಶ ರಾಠೋಡ ಬೀದರ್,ವಿನೋದ ಹಳಿಮನಿ ವಿಜಯನಗರ ರವರುಗಳು ರಾಜ್ಯ ಮಟ್ಟದ ಆದರ್ಶ ಗುರುವರ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.