ರಾಜ್ಯಮಟ್ಟದ ಅಥ್ಲೇಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಬಹುಮಾನ

ಶಿವಮೊಗ್ಗ, ಮಾ.೮; ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಫೆ. 20 ರಿಂದ 22ರವರೆಗೆ ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಥ್ಲೇಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಕ್ರೀಡಾಶಾಲೆಯ ವಿದ್ಯಾರ್ಥಿನೀಯರು ಅಥ್ಲೇಟಿಕ್ ತರಬೇತುದಾರ ಬಾಳಪ್ಪ ಮಾನೆಯವರ ಮಾರ್ಗದರ್ಶನದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದ್ದಾರೆ.ಗೌತಮಿ ಗೌಡ ಎತ್ತರ ಜಿಗಿತದಲ್ಲಿ 1.58 ಸೆ.ಮೀ. ಎತ್ತರ ಜಿಗಿದು ತಮ್ಮ 6 ವರ್ಷ ಹಿಂದಿನ ದಾಖಲೆಯನ್ನು ಮುರಿದು ಪ್ರಥಮ ಸ್ಥಾನ ಗಳಿಸಿದ್ದಾರೆ ಹಾಗೂ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನವನ್ನು, ಗೌರಾಂಗಿ ಗೌಡ 100 ಮೀ ಹರ್ಡಲ್ಸ್ನಲ್ಲಿ ಪ್ರಥಮ ಮತ್ತು ಲಕ್ಷಿö್ಮÃ ಹೆಚ್.ಪಿ. 400 ಮೀ ಹಾಗೂ 600 ಮೀ ಓಟದಲ್ಲಿ ತೃತೀಯ ಸ್ಥಾನಗಳಿಸಿ ಜಿಲ್ಲೆಗೆ ಗೌರವ ತಂದುಕೊಟ್ಟಿದ್ದಾರೆ. ಈ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ. ಹಾಗೂ ಸಿಬ್ಬಂದಿವರ್ಗದವರು ಶುಭ ಹಾರೈಸಿದ್ದಾರೆ.