ರಾಜ್ಯಮಟ್ಟದಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಮಾನ್ವಿ,ಮೇ.೧೪- ಪಟ್ಟಣದ ವಲ್ಲಂಕಿ ರಾಮಕೃಷ್ಣ ವರ್ಮ ಹಿರಿಯ ಫ್ರೌಡಶಾಲೆಯ ಆವರಣದಲ್ಲಿ ಕಾಕತೀಯ ಶಿಕ್ಷಣ ಸಂಸ್ಥೆಯ ವತಿಯಿಂದ ಶಾಲೆಯಲ್ಲಿ ಅಭ್ಯಾಸಮಾಡಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಉತ್ತಮವಾದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗೊಡವರ್ತಿ ಸತ್ಯನಾರಯಣ ಸನ್ಮಾನಿಸಿ ಗೌರವಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ದಿಗಾಗಿ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿರುವುದಕ್ಕಾಗಿ ಕಳೆದ ಮೂರು ವರ್ಷಗಳಿಂದ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್‍ಯಾಂಕ್‌ಗಳನ್ನು ಪಡೆಯುವ ಮೂಲಕ ಅವರ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ ಶಾಲೆಯಲ್ಲಿನ ಶಿಕ್ಷಕ ಸಮೂಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಶಾಲೆಗೆ ಉತ್ತಮ ಫಲಿತಾಂಶವನ್ನು ಪಡೆಯಲು ಕಾರಣರಾಗಿದ್ದಾರೆ ಎಂದು ಸ್ಮಾರಿಸಿ ಕೊಂಡರು.
ರಾಜ್ಯ ಮಟ್ಟದಲ್ಲಿ ೫ನೇ ಸ್ಥಾನವನ್ನು ಪಡೆದಿರುವ ಅನನ್ಯಭಟ್ ಅವರ ಪರವಾಗಿ ಅವರ ತಂದೆ ಜಗನ್ನಾಥ ಭಟ್ ಹಾಗೂ ಅಕ್ಷಿತ್ ರಾಥೋಡ್, ಖಾಶೀಫಾ ತಜರೀನ್, ಶ್ರೀಜಾ, ಎಸ್.ಸ್ವಾತಿ, ಪ್ರೀತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಮನ್ನೆ ಉದಯ್ ಭಾಸ್ಕರ್ ರಾವ್, ತಾಳ್ಳೂರಿ ರಾಮಕೃಷ್ಣ, ಕೊಡವಟಿ ಶ್ರೀನಿವಾಸ, ಬೊಪ್ಪನ ಫಣೀಂದ್ರಕುಮಾರ್, ವೇಗುಳ್ಳ ಸುರೇಶ, ಚಿಲಕೂರಿ ಪ್ರಸಾದ್ ರಾವ್, ಮುಖ್ಯಗುರು ವೀರಭದ್ರಗೌಡ ಹಾಗೂ ಶಾಲೆಯ ಶಿಕ್ಷಕರು, ಪಾಲಕರು ವಿದ್ಯಾರ್ಥಿಗಳು ಇದ್ದರು.