
ಶಿರಹಟ್ಟಿ,ಮಾ.12: ಬೆಂಗಳೂರಿನ ಚಂದನ ಸ್ಟುಡಿಯೋದಲ್ಲಿ ನಡೆದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ಸುಗನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ವಿನಯಾ ರುದ್ರಗೌಡ ಪಾಟೀಲ ತೃತಿಯ ಸ್ಥಾನ ಪಡೆದಿದ್ದಾಳೆ.
ಈ ಸ್ಪರ್ಧೆಯು ಭಾರತ ಸರ್ಕಾರ ಸರಕಾರಿ ಶಾಲೆಯ ಮಕ್ಕಳ ಪ್ರತಿಭೆ ಗುರುತಿಸಲು ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದು, ತಾಲೂಕಾ ಮಟ್ಟ, ಜಿಲ್ಲಾಮಟ್ಟ ಮತ್ತು ಬೆಳಗಾವಿ ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿ ವಿನಯಾ ರುದ್ರಗೌಡ ಪಾಟೀಲ ದ್ವಿತೀಯ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು, ಇದೇ ಮಾರ್ಚ 8ರಂದು ಬೆಂಗಳೂರಿನ ದೂರದರ್ಶನ ಚಂದನ ಸ್ಟುಡಿಯೋದಲ್ಲಿ ನಡೆದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಈ ಸಾಧನೆಗೆ ಜಿಲ್ಲಾ ಉಪನಿರ್ದೇಶಕ ಜಿ.ಎಮ್. ಬಸವಲಿಂಗಪ್ಪ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಮ್.ಮುಂದಿನಮನಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್ ಭಜಂತ್ರಿ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮನಗೌಡ್ರ, ಚಂದ್ರಶೇಖರ ವಡಕಣ್ಣವರ, ಗ್ರಾಪಂ ಅಧ್ಯಕ್ಷ ಸಿದ್ಧಲಿಂಗಯ್ಯ ಹೊಂಬಾಳಿಮಠ, ಮಂಜುನಾಥ ಸವಣೂರು, ಎನ್.ಬಿ ಪೂಜಾರ, ಹಾಲೇಶ ಜಕ್ಕಲಿ, ರುದ್ರಗೌಡ ಪಾಟೀಲ, ಚಂದ್ರಶೇಖರ ಸೋಮಣ್ಣವರ ಸೇರಿದಂತೆ ಗ್ರಾಮದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.