ರಾಜ್ಯಪ್ರಶಸ್ತಿ ಪುರಸ್ಕೃತೆ ಸುಲ್ತಾನ್ ಬಿ ಗೆ ಶಾಸಕರಿಂದ ಸನ್ಮಾನ


ಜಗಳೂರು.ನ.೬; ಕನ್ನಡ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತೆ ಪಟ್ಟಣದ ಜಗಳೂರು ಗೊಲ್ಲರಹಟ್ಟಿ ಗ್ರಾಮದ ಸುಲ್ತಾನ್ ಬಿ ಅವರಿಗೆ ಶಾಸಕ ಎಸ್.ವಿ.ರಾಮಚಂದ್ರ ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಕೆಲ ವರ್ಷಗಳ ಹಿಂದೆ ಜೈಕರ್ನಾಟಕ ಸಂಘಟನೆ  ಲಯನ್ಸ್ ಕ್ಲಬ್ ಸಹಕಾರದಿಂದ ಕಾರ್ಯಕ್ರಮದಲ್ಲಿ  ಗ್ರಾಮೀಣ ಸಿರಿ ಪ್ರಶಸ್ತಿ ನೀಡಿ  ಸನ್ಮಾನಿಸಲಾಗಿತ್ತು.ಇದೀಗ ರಾಜ್ಯಮಟ್ಟದ ಪ್ರಶಸ್ತಿ ಸ್ವಾಗತರ್ಹವಾಗಿದ್ದು.ಅಜ್ಜಿ ಶತಾಯುಷಿಯಾಗಿ  ಸಂತಸದಿಂದ ಜೀವನಸಾಗಿಸಲಿ ಬಿಜೆಪಿ ಪಕ್ಷದ ನಮ್ಮದೇ ರಾಜ್ಯದಲ್ಲಿನ ಅವರ ಆಡಳಿತ ಸರ್ಕಾರ ದಶಕಗಳಿಂದ ಸೂಲಗಿತ್ತಿ  ಕಾಯಕದ ಜೊತೆ ಹಾವು ಹಿಡಿಯುವ ಹಾಗೂ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವ ಸಲ್ಲಿಸಿದ ಅಜ್ಜಿಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಗುರುತಿಸಿ ಬರದನಾಡಿನ ವೃದ್ದೆಗೆ ರಾಜ್ಯ ಮಟ್ಟದ ಪ್ರಶಸ್ತಿ ಜಿಲ್ಲೆಗೆ ಕೀರ್ತಿ ತಂದು ಪ್ರತಿಯೊಬ್ಬರಿಗೂ  ಗೌರತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಪ.ಪಂ ಅಧ್ಯಕ್ಷ ಸಿದ್ದಪ್ಪ, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ,ಪ.ಪಂ ಸದಸ್ಯರಾದ ಲುಕ್ಮಾನ್ ಖಾನ್, ಪಾಪಲಿಂಗಪ್ಪ,ದೇವರಾಜ್ ಪ.ಪಂ ನಾಮನಿರ್ದೇಶಿತ ಸದಸ್ಯ ಬಿ.ಪಿ.ಸುಬಾನ್,ಬಿಜೆಪಿ ಮುಖಂಡರಾದ ಬಿಳಿಚೋಡು ಮಹೇಶ್ ಕಾನನಕಟ್ಟೆ ಪ್ರಭು, ಮರೆನಹಳ್ಳಿ ನಾಗರಾಜ್ ರಂಗಾಪುರ ಹನುಮಂತಪ್ಪ. ತಿಪ್ಪೇಸ್ವಾಮಿ. ಸೇರಿದಂತೆ ಬಿಜೆಪಿ ಪಕ್ಷದ ಎಲ್ಲಾ ಮುಖಂಡರು  ಕುಟುಂಬವರ್ಗದವರು  ಭಾಗವಹಿಸಿದ್ದರು.