ರಾಜ್ಯಪಾಲನಾಗುತ್ತೇನೆ ಎಂದು ನಂಬಿಸಿ 3.80 ಲಕ್ಷ ರೂ.ವಂಚನೆ

ಕಲಬುರಗಿ,ಜ 11: ತೆಲಂಗಾಣದ ಮುಂದಿನ ರಾಜ್ಯಪಾಲನಾಗುತ್ತೇನೆ ಎಂದು ನಂಬಿಸಿ, ದಂಪತಿಗಳಿಗೆ ಪರಿಚಿತ ವ್ಯಕ್ತಿಯೊಬ್ಬ 3.80 ಲಕ್ಷ ರೂ ವಂಚಿಸಿದ ಘಟನೆ ನಗರದಲ್ಲಿ ಜರುಗಿದೆ.
ನಗರದ ಎಂಬಿ ನಗರ ನಿವಾಸಿ ಶಾಂತಕುಮಾರ ವೀರಸಂಗಪ್ಪ ಜಟ್ಕೂರ ಎಂಬಾತ ಹಣ ವಂಚಿಸಿದಾತ. ಹಳೆ ಜೇವರಗಿ ರಸ್ತೆ ಶಾಸ್ತ್ರೀ ನಗರದ ನಿವಾಸಿಗಳಾದ ವಿಶ್ವನಾಥ ಚಿಮಕೋಡ,ಪ್ರೇಮಕಲಾ ವಿಶ್ವನಾಥ ಚಿಮಕೋಡ ಕುಟುಂಬಕ್ಕೆ 3,4 ವರ್ಷದಿಂದ ಶಾಂತಕುಮಾರ ಪರಿಚಿತನಾಗಿದ್ದ.ಆಗಾಗ ಮನೆ ಬಂದು ಹೋಗುತ್ತಿದ್ದ. ತನ್ನ ವಾಹನಕ್ಕೆ ಸರಕಾರಿ ವಾಹನ ಎಂದು ಫಲಕ ಅಳವಡಿಸಿದ್ದ.ನಾನೇ ತೆಲಂಗಾಣದ ಮುಂದಿನ ರಾಜ್ಯಪಾಲನಾಗುತ್ತೇನೆ ಎಂದು ದಂಪತಿಗೆ ನಂಬಿಸಿದ್ದ.
ಈತನ ಮೋಸದಾಟದ ಬಲೆಗೆ ಬಿದ್ದ ದಂಪತಿಗಳು 2021ರ ಸಪ್ಟೆಂಬರ್ 19 ರಂದು ಎರಡು ಕಂತುಗಳಲ್ಲಿ 3.80 ಲಕ್ಷ ರೂ ನೀಡಿದ್ದರು. ಆಗ ಈ ದಂಪತಿಗಳ ಸಂಪರ್ಕಕ್ಕೆ ಸಿಕ್ಕದಂತೆ ಶಾಂತಕುಮಾರ ಪರಾರಿಯಾಗಿದ್ದ.ಫೋನಿಗೂ ಸಿಗುತ್ತಿರಲಿಲ್ಲ.ಈತ ದಂಪತಿಗಳಿಗೆ ನೀಡಿದ 3 ಚೆಕ್‍ಗಳು ಸಹ ಬೌನ್ಸ್ ಆಗಿವೆ ಎಂದು ಅವರು ಸ್ಟೇಷನ್ ಬಜಾರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.