ರಾಜ್ಯದ 9 ಮಂದಿಯಿದ್ದ ಅಂತರರಾಜ್ಯ ಆನ್‌ಲೈನ್ ವಂಚಕರ ಗ್ಯಾಂಗ್ ಪತ್ತೆ

ಗಯಾ (ಬಿಹಾರ),ಜ.9- ನಗರದ ಖಾಸಗಿ ಅತಿಥಿಗೃಹವೊಂದರ ದಾಳಿ ನಡೆಸಿರುವ ಪೊಲೀಸರು ಕರ್ನಾಟಕದ 9 ಮಂದಿ ಒಳಗೊಂಡ 16 ಮಂದಿಯ ಅಂತರರಾಜ್ಯ ಆನ್‌ಲೈನ್ ವಂಚಕರ ಗ್ಯಾಂಗ್​ ನ್ನು ಬಂಧಿಸಿದ್ದಾರೆ.
ಗ್ಯಾಂಗ್ ಲೀಡರ್ ರೋಶನ್ ಕುಮಾರ್ ಎಂಬಾತನನ್ನು ಬಂಧಿಸಿದ್ದು ಗ್ಯಾಂಗ್ ನಿಂದ ಗಾಂಜಾ, 2 ಕೆಜಿ ನಕಲಿ ಚಿನ್ನ, 24 ಸ್ಮಾರ್ಟ್​ ಫೋನ್​ಗಳು, ಮೂರು ಬೈಕ್​ಗಳು, ದುಬಾರಿ ವಾಚ್​, ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ
ಇಂಜಿನಿಯರಿಂಗ್ ಅರ್ಧಕ್ಕೆ ಮೊಟಕುಗೊಳಿಸಿ ಹಣಗಳಿಕೆಗೆ ಅಡ್ಡದಾರಿ ಕಂಡುಕೊಂಡಿದ್ದ ಲೀಡರ್ ರೋಶನ್ ಕುಮಾರ್ ಗ್ಯಾಂಗ್ ಮೂಲಕ ಆನ್​ಲೈನ್​ ವಂಚನೆ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಂಗ್ ನ ಆರೋಪಿಗಳು ಒಂದು ತಿಂಗಳಿಂದ ಬೋಧ್ ಗಯಾ ಪ್ರದೇಶದಲ್ಲಿ ಸಕ್ರಿಯವಾಗಿತ್ತು. ತಮ್ಮ ರಹಸ್ಯ ಕಾರ್ಯಾಚರಣೆಗಳನ್ನು ಖಾಸಗಿ ಹೊಟೇಲ್​ ಒಂದರಲ್ಲಿ ಕುಳಿತು ಮಾಡುತ್ತಿದ್ದರು. ವಂಚಕರು ಹೊಟೇಲ್​ನ ಕೋಣೆಯಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿ 16ಮಂದಿಯನ್ನು ಬಂಧಿಸಿದ್ದಾರೆ
ಈ ತಂಡದ ಮುಖ್ಯ ಗುರಿ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣದ ಗ್ರಾಹಕರು. ಆನ್​ಲೈನ್​ ಲಾಟರಿ ಆಮಿಷವೊಡ್ಡುತ್ತಿದ್ದ ತಂಡ ಆಯಾ ರಾಜ್ಯದವರೊಂದಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸುವ ತಂಡವನ್ನು ಸಜ್ಜುಗೊಳಿಸಿತ್ತು.
ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.