ರಾಜ್ಯದ 50 ಕಡೆ  ಜನ ಹಿತ ಪಕ್ಷ ಸ್ಪರ್ಧೆ: ಜಯರಾಂ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.04: ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ 50 ಕ್ಷೇತ್ರಗಳಲ್ಲಿ ಜನಹಿತ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ವಿ.ಜಯರಾಂ ಹೇಳಿದ್ದಾರೆ.
ಅವರಿಂದು ನಗರದ ಬುಡಾ ಕಾಂಪ್ಲೆಕ್ಸ್ ನಲ್ಲಿನ ಪಕ್ಷದ ಕಚೇರಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಬಳ್ಳಾರಿ ನಗರ ಕ್ಷೇತ್ರದಿಂದ ಹಂಪೇರು ಆಲೇಶ್ವರಗೌಡ ಅವರನ್ನು ಕಣಕ್ಕಿಳಿಸುತ್ತಿದ್ದು. ಜಿಲ್ಲೆಯ ಎಲ್ಲಾ ಉಳಿದ ಕ್ಷೇತ್ರಗಳು ಸೇರಿದಂತೆ ರಾಜ್ಯದ ಇನ್ನಿತರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸಧ್ಯದಲ್ಲೇ ಪ್ರಕಟಿಸಲಿದೆಂದರು.
ರಾಷ್ಟ್ರೀಯ ಪಕ್ಷಗಳು ಜನಹಿತ ಮರೆತಿವೆ ಅದಕ್ಕಾಗಿ ನಮ್ಮ‌ಪಕ್ಷ ಜನಹಿತ ಯೋಜನೆಗಳ ಮೂಲಕ‌ ಚುನಾವಣೆಯ‌ನ್ನು ಎದಿರಿಸುವುದಾಗಿ ಹೇಳಿದರು.
ಅಭ್ಯರ್ಥಿ ಆಲೇಶ್ವರಗೌಡ ಮಾತನಾಡಿ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ, ಅಭಿವೃದ್ಧಿ ಎನ್ನುತ್ತವೆ. ಆದರೆ ಅನುಷ್ಟಾನ ಸರಿಯಾಗಿ ಆಗುತ್ತಿಲ್ಲ. ನಗರದಲ್ಲಿ ಜನಹಿತವಾದ ಯೋಜಬಗಳ ಅನುಷ್ಟಾನಕ್ಕಾಗಿ‌ ನಾನು ಹೋರಾಟ ಮಾಡುವೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮಯಖಂಡರುಗಳಾದ ಪಾರ್ಥಸಾರಥಿ, ಜಿ.ಪಿ.ರಾವ್, ಕುಮಾರಸ್ವಾಮಿ ಮೊದಲಾದವರು ಇದ್ದರು.