ರಾಜ್ಯದ ೧೩೦ ಜಿಲ್ಲೆ ಬರಗಾಲ ಘೋಷಣೆಗೆ ಒತ್ತಾಯ

ರಾಯಚೂರು, ಸೆ.೦೫- ರಾಜ್ಯದ ೧೩೦ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕೂಡಲೇ ಬರಗಾಲ ಪೀಡಿತ ಪ್ರದೇಶಘೋಷಣೆ ಮಾಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ರಾಜ್ಯ ಮತ್ತೆ ಬರಗಾಲಕ್ಕೆ ತುತ್ತಾಗಿದೆ. ಈಗಾಗಲೇ ಸರ್ಕಾರ ೧೩೦ ತಾಲೂಕುಗಳನ್ನು ಬಲ ಪ್ರದೇಶ ಎಂದು ಘೋಷಿಸಲು ಆಲೋಚನೆ ಮಾಡಿದೆ. ಕೂಡಲೇ ಬರ ಪ್ರದೇಶವೆಂದು ಘೋಷಣೆ ಮಾಡಿ ಸಮರೋಪಾದಿಯಲ್ಲಿ ಬರವನ್ನು ಎದುರಿಸಲು ಸಜ್ಜಾಗಬೇಕು ಎಂದರು.
ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಸಾಲ ವಸೂಲಿಗೆ ತಡೆ ನೀಡಬೇಕು, ಬರವನ್ನು ತಡೆಗಟ್ಟಲು ಸಣ್ಣ ನೀರಾವರಿಗೆ ಒತ್ತು ನೀಡಿ ಅಂತ ಜಲವನ್ನು ವೃದ್ಧಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ೨೦೦ ದಿನಗಳಿಗೆ ವಿಸ್ತರಿಸಿ, ರೈತ ಕುಟುಂಬದ ಇಬ್ಬರು ಸದಸ್ಯರಿಗೆ ಅನ್ವಯಿಸಬೇಕು, ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆ ಕ್ರಮವನ್ನು ಅನುಸರಿಸಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು. ಕೇಂದ್ರ ಸರ್ಕಾರದ ಕಾಲದ್ದಾಗಿದ್ದು, ಅದನ್ನು ಮಾರ್ಪಾಡು ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಬೇಕು. ಹಾಗೆಯೇ ರಾಜ್ಯ ಸರ್ಕಾರ ಎಸ್.ಡಿ.ಆರ್.ಎಫ್ ಮಾನದಂಡವನ್ನು ಮಾರ್ಪಾಡು ಮಾಡಬೇಕು. ಕೃಷಿ ಸಾಲ ವಸೂಲಾತಿಯನ್ನು ನಿಲ್ಲಿಸಿ ಕ್ರಮ ಕೈಗೊಳ್ಳಬೇಕು.
ಕೃಷಿ ಪಂಪ್‌ಸೆಟ್‌ಗಳಿಗೆ ಗುಣಾತ್ಮಕ ೩-ಫೇಸ್ ವಿದ್ಯುತಚ್ಛಕ್ತಿಯನ್ನು ಕನಿಷ್ಟ ೭ ಗಂಟೆಗಳ ಕಾಲ ಸರಬರಾಜು ಮಾಡಬೇಕು.
ಕಛೇರಿ ಜಲಾಷಯಗಳಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿ ರಾಜ್ಯದ ರೈತರನ್ನು ರಕ್ಷಿಸಬೇಕು. ಸರ್ಕಾರ ರಾಜ್ಯದ ರೈತರನ್ನು ರಕ್ಷಿಸಲು ವಿಫಲವಾದಲ್ಲಿ ಏಕರೆ ಒಂದಕ್ಕೆ ರೂ. ೨೫,೦೦೦ ಪರಿಹಾರ ನೀಡಬೇಕು.ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು.
ರಾಯಚೂರು ಗ್ರಾಮೀಣ ಭಾಗದಲ್ಲಿ ಹಾದುಹೋಗುವ ಸೂರತ್ ಬಂದ ಚಿನ್ನ: ೧೫೦ ರಾಷ್ಟ್ರೀಯ ಹೆದ್ದಾರಿ ಹಾದುಹೋಗಲಿದ್ದು ರೈತರ ಹೊಲಗಳಿಗೆ ಹೊಳಲು ರಸ್ತೆ ಬಂದ್ ಮಾಡಿರುವುದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ಆದಕಾರಣ ರೈತರ ಹೊಲಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕು.
ಈ ಸಂದರ್ಭದಲ್ಲಿ ಚಾಮರಾಜ ಮಾಲಿಪಾಟೀಲ್, ದೊಡ್ಡ ಬಸನಗೌಡ ಬಲ್ಲಟಗಿ,ಬೂದೆಯ್ಯ ಸ್ವಾಮಿ, ಗೋವಿಂದ ಶಂಕರಗೌಡ ಸೇರಿದಂತೆ ಉಪಸ್ಥಿತರಿದ್ದರು.