
ಕೆಂಗೇರಿ.ನ೩: ಕನ್ನಡ ನಾಡು ನುಡಿ ಭಾಷೆಗೆ ಸಂಕಟ ಎದುರಾದಾಗ ಸ್ವಾಭಿಮಾನಿ ಕನ್ನಡಿಗರು ಪ್ರತಿಯೊಬ್ಬರು ಒಗ್ಗೂಡಿ ರಾಜ್ಯದ ಹಿತ ಕಾಪಾಡಬೇಕಾಗಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರ ಶಾಸಕ ಎಸ್. ಟಿ. ಸೋಮಶೇಖರ್ ಹೇಳಿದರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೆಮ್ಮಿಗೆಪುರ ವಾರ್ಡ್ ಬಿಸಿಸಿಎಚ್‌ಎಸ್ ಬಡಾವಣೆ ನಿವಾಸಿಗಳ ಸಂಘ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಸಂಘದ ವತಿಯಿಂದ ಆಯೋಜಿಸಿದ್ದ ೬೮ನೇ ರಾಜ್ಯೋತ್ಸವ ಕನ್ನಡ ಕಲರವ ೨೦೨೩ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆಯ ಮಹತ್ವದ ಅರಿತು ನಾವು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. ಕನ್ನಡ ಭಾಷಾ ಬೆಳವಣಿಗೆಗೆ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ ಅವರ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಕನ್ನಡ ಭಾಷಾ ಬೆಳವಣಿಗೆಗೆ ಕೊಡುಗೆ ನೀಡಬೇಕಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಬಿ. ಆರ್. ಶಿವಮಾದಯ್ಯ ಮಾತನಾಡಿ ನಗರೀಕರಣ ಹಾಗೂ ಇನ್ನಿತರ ಕಾರಣಗಳಿಂದ ಕನ್ನಡ ಭಾಷೆಗೆ ಕುತ್ತು ಎದುರಾಗಿದ್ದು ಸ್ವಾಭಿಮಾನಿ ಕನ್ನಡಿಗರು ದೈನಂದಿನ ವ್ಯವಹಾರದಲ್ಲಿ ಕನ್ನಡ ಭಾಷೆಗೆ ಬಳಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ದೃಢ ಸಂಕಲ್ಪ ಮಾಡಬೇಕಾಗಿದೆ ಎಂದರು. ನಾಡಿನಲ್ಲಿ ನೆಲೆಸಿರುವ ಅನ್ಯ ಬಾಷಿಕರು ಕನ್ನಡ ಭಾಷೆಯ ಕಲಿಯುವಂತಹ ವಾತಾವರಣ ನಿರ್ಮಿಸಿ , ಕನ್ನಡ ಭಾಷೆ ಕಲಿಯಲು ಪ್ರೇರೇಪಿಸಬೇಕಿದೆ ಎಂದರು. ಬಿಬಿಎಂಪಿ ಹೆಮ್ಮಿಗೆಪುರ ವಾರ್ಡ್ ನ ಮಾಜಿ ಸದಸ್ಯ ಸದಸ್ಯ ಆರ್ಯ ಶ್ರೀನಿವಾಸ್, ಕಗ್ಗಲಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೃತ ಗೌಡ, ಮುಖಂಡರಾದ ವಾಜರಹಳ್ಳಿ ಶಶಿಕುಮಾರ್, ಪ್ರಕಾಶ್ ಗೌಡ, ಶ್ರೀನಾಥ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.