ರಾಜ್ಯದ ಸಂಸ್ಕೃತಿ ಬಿಂಬಿಸಿದ ನೂರಕ್ಕೂ ಹೆಚ್ಚು ಕಲಾತಂಡ

ಸಂಜೆವಾಣಿ ನ್ಯೂಸ್
ಮೈಸೂರು: ಅ.25:- ವಿಶ್ವ ವಿಖ್ಯಾತ ಜಂಬೂ ಸವಾರಿಯಲ್ಲಿ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ನೂರಕ್ಕೂ ಹೆಚ್ಚು ಕಲಾ ಪ್ರಕಾರಗಳನ್ನು ಕಲಾತಂಡಗಳು ಪ್ರದರ್ಶಿಸಿದವು.
ಮಂಡ್ಯ ಅರ್ಕೇಶ್ವರನಗರದ ಲೋಕೇಶ್ ಕಲಾವಿದರ ವೀರಗಾಸೆ, ಬಾಗಲಕೋಟೆಯ ಸೋಮನಕೊಪ್ಪದ ಶ್ರೀ ಬೀರಲಿಂಗೇಶ್ವರ ತಂಡದ ಡೊಳ್ಳು ಕುಣಿತ, ಬಳ್ಳಾರಿ ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುದಾಯದ ಹಕ್ಕಿ ಪಿಕ್ಕಿ ನೃತ್ಯ, ಡಾ.ಬಿ.ರಾಮಾಂಜನೇಯ ತಂಡದ ಪೆÇೀಟಿ ವೇಷ, ಬೆಳಗಾವಿಯ ಶ್ರೀ ಮಾಂತೇಷ ಬಡಿಗರ ಅವರ ಝಾಂಕ್ ಪಥಕ್, ಮೈಸೂರು ತಲಕಾಡು ಕೃಷ್ಣಮೂರ್ತಿಯವರ ಕಂಸಾಳೆ, ರಾಮನಗರ ಜಿಲ್ಲೆಯ ತೂಬಿನಕೆರೆಯ ಶ್ರೀ ಬೈರವೇಶ್ವರ ಸಾಂಸ್ಕೃತಿ ಕಲಾ ತಂಡದ ಸೋಮನ ಕುಣಿತ, ಬೆಂಗಳೂರು ನೆಲಮಂಗಲದ ಶ್ರೀ ಹನುಮಂತ ರಾಮಣ್ಣ ತಂಡದ ಸೋಮನ ಕುಣಿತ, ಬೆಂಗಳೂರಿನ ಶ್ರೀ ಕೃಷ್ಣ ಜನಪದ ತಂಡದ ನವಿಲು ನೃತ್ಯ, ಕೋಲಾರ ಜಿಲ್ಲೆಯ ಕೀಲು-ಕುದುರೆ ಸಂಘದ ಗಾರುಡಿ ಗೊಂಬೆ, ಬೀದರ್ ಜಿಲ್ಲೆಯ ಜೈ ಭವಾನಿ ರಂಗಭೂಮಿ ಕಲಾವಿದರ ಸಂಘದ ಹಲಗೆ ಮೇಳ, ಚಾಮರಾಜನಗರ ರಾಮಸಮುದ್ರದ ಗೊರವನ ಕುಣಿತ ಹಾಗೂ ಗೊರಕನನೃತ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಗಾರುಡಿ ಗೊಂಬೆ, ಬಾಗಲಕೋಟೆಯ ಜಿಲ್ಲೆಯ ಕರಡಿ ಮಜಲು, ಮಂಡ್ಯದ ರಂಗ ಕುಣಿತ, ಚಿಕ್ಕಮಗಳೂರಿನ ವೀರಭದ್ರ ಕುಣಿತ, ಚಿಕ್ಕಮಗಳೂರಿನ ಹಲಗೆ ಮೇಳ ಜನಮನ ಗೆದ್ದವು.
ಚಿತ್ರದುರ್ಗದ ಖಾಸಬೇಡರ ಪಡೆ ನೃತ್ಯ, ನಂಜನಗೂಡಿನ ತಮಟೆ-ನಗಾರಿ, ದಕ್ಷಿಣ ಕನ್ನಡ ಜಿಲ್ಲೆಯ ಕಂಗಿಲು ಕುಣಿತ, ನರಸೀಪುರ ತಾಲ್ಲೂಕಿನ ಸ್ಯಾಕ್ಲೋಫೆÇೀನ್, ದಾವಣಗೆರೆ ಜಿಲ್ಲೆಯ ಡೊಳ್ಳು ಕುಣಿತ, ಬಳ್ಳಾರಿ ಜಿಲ್ಲೆಯ ಹಗಲು ವೇಷ ಕುಣಿತ, ಧಾರವಾಡ ಜಿಲ್ಲೆಯ ಜಗ್ಗಲಗೆ ಮೇಳ, ಗದಗ ಜಿಲ್ಲೆಯ ಕರಡಿ ಮಜ್ಜಲು, ಉತ್ತರ ಕನ್ನಡ ಜಿಲ್ಲೆಯ ಗೊಂಡರ ಡಕ್ಕೆ, ಹಾಸನದ ಸೋಮನ ಕುಣಿತ, ಕಲುಬುರಗಿ ಹಾಗೂ ಧಾರವಾಡ ಜಿಲ್ಲೆಯ ಲಂಬಾಣಿ ನೃತ್ಯ, ಸೋಮವಾರ ಪೇಟೆಯ ಮಲೆನಾಡ ಸುಗ್ಗಿ ಕುಣಿತ, ಕೊಡಗು ಬುಡಕಟ್ಟಿನ ನೃತ್ಯ, ಕೋಲಾರದ ಗಾರುಡಿ ಗೊಂಬೆ, ಬೆಳಗಾವಿ ಡೊಳ್ಳು ಕುಣಿತ, ಮಂಡ್ಯ ಜಿಲ್ಲೆಯ ದೊಣ್ಣೆ ವರಸೆ, ಪಟ ಕುಣಿತ, ಮೈಸೂರಿನ ವೀರಭದ್ರ ಕುಣಿತ, ಪೂಜಾ ಕುಣಿತ, ತಮಟೆ-ನಗಾರಿ ಹಾಗೂ ಕಂಸಾಳೆ, ರಾಯಚೂರಿನ ಹಗಲು ವೇಷ, ರಾಮನಗರದ ಕೋಳಿನೃತ್ಯ, ಶಿವಮೊಗ್ಗದ ಡೊಳ್ಳು ಕುಣಿತ, ಬೆಳಗಾವಿಯ ಝಾಂಕ್ ಪಥಕ್, ಉಡುಪಿಯ ಗುಮಟೆ ನೃತ್ಯ, ಮಹಿಳಾ ಚಂಡೆ, ಉತ್ತರ ಕನ್ನಡ ಜಿಲ್ಲೆಯ ಗೊಂಡರ ಡಕ್ಕೆ, ಶಿರಸಿಯ ಬೇಡರ ವೇಷ ಈ ನೆಲದ ಸಂಸ್ಕೃತಿ ತೋರಿದವು.
ವಿಜಯಪುರದ ಸುತ್ತಿಗ ಕುಣಿತ, ಹೆಜ್ಜಿಮೇಳ, ವಿಜಯನಗರ ಜಿಲ್ಲೆಯ ಲೇಂಗಿ ನೃತ್ಯ, ನಾಗಪುರದ ತಪ್ಪಟಂ/ಒಯಿಲಾಟಂ ಫುಡ್ಕ/ಧಾಫ್ ನೃತ್ಯ, ಡಾಂಗಿ ಡಾಂಗಿ ನೃತ್ಯ, ಗೋಕಾಕ್‍ನ ಝಾಂಜ್ ಪಥಕ್, ಚಿತ್ರದುರ್ಗದ ಉದಮೆ ಅರೆವಾದ್ಯ, ಬೆಳಗಾವಿಯ ಜಗ್ಗಲಗೆ ಮೇಳ, ಕೊಪ್ಪಳದ ಹಗಲು ವೇಷ, ಬಾಗಲಕೋಟೆಯ ಮುಳ್ಳುಕುಣಿತ, ಚಿಕ್ಕಮಗಳೂರು ಜಿಲ್ಲೆಯ ಚಿಟ್ಟೆಮೇಳ, ಹುಬ್ಬಳ್ಳಿಯ ದಾಲಪಟ, ಜೋಗತಿ ನೃತ್ಯ, ಬೆಳಗಾವಿಯ ದಟ್ಟಿ ಕುಣಿತ, ಹಾಸನ ನಂದಿಕೋಲು, ದೊಡ್ಡ ಹೊಸಗಾವಿಯ ಕರಗ ಕೋಲಾಟ, ರಾಯಚೂರಿನ ಖಣಿವಾದನ, ಬಾಗಲಕೋಟೆಯ ಡಮಾಮಿ ನೃತ್ಯ, ಹೂವಿನ ನೃತ್ಯ, ಬೆಳಗಾವಿಯ ಕರ್ಬಲ್ ಕುಣಿತ, ನಾಗಪುರದ ಫೂಮರ್ ನೃತ್ಯ, ಗಿಡ್ಡ ಲೂಡ್ಡಿ ನೃತ್ಯ, ಧಾರವಾಡದ ಕಥಕಳಿ ಗೊಂಬೆ ಪ್ರದರ್ಶನ, ಮೈಸೂರು ಜಿಲ್ಲೆಯ ಮರಗಾಲು ಸವಾರಿ ಜನಸ್ತೋಮ ಕಣ್ತುಂಬಿಕೊಂಡರು.