ರಾಜ್ಯದ ವೃದ್ಧಾಶ್ರಮಗಳನ್ನು ಮುಚ್ಚಲು ಆಗ್ರಹ

ಚಿಂಚೋಳಿ,ಅ.9- ಪಾಲಕರ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕೇಂದ್ರ ಕಾಯ್ದೆ ಅಧಿನಿಯಮ 2007 ಮತ್ತು ಕರ್ನಾಟಕ ಸರ್ಕಾರ ನಿಯಮಾವಳಿಗಳು 2009 ಕಟ್ಟುನಿಟ್ಟಾಗಿ ಜಾರಿಯಲ್ಲಿ ಇಡಲು ಸರ್ಕಾರ ಕಟ್ಟಪಣೆ ಮಾಡಿ ಆದೇಶ ಹೊರಡಿಸುವÀಂತೆ ಹಿರಿಯ ಸಾಮಾಜಿಕ ಕಾರ್ಯಕರ್ತರದ ರಮೇಶ್ ಯಾಕಾಪೂರ, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಮಹಿಳಾ ಮತ್ತು ಮಕ್ಕಳ ಸಚಿವರಿಗೆ ಮನವಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ದೇಶಕ್ಕೆ ಅನ್ವಯವಾಗುವಂತೆ ಪಾಲಕರ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಬಗೆಗಿನ ಕೇಂದ್ರ ಕಾಯ್ದೆ ಅಧಿನಿಯಮ 2007 ರಲ್ಲಿ ಜಾರಿಗೆ ಬಂದಿರುತ್ತದೆ. ಆದ್ಯಾಗಿಯು ಇಡೀ ದೇಶಾದ್ಯಾಂತ ಅನೇಕ ರಾಜ್ಯಗಳಲ್ಲಿ ವೃದ್ಧಾಶ್ರಮಗಳು ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸ್ಥಾಪನೆ ಮಾಡಿರುತ್ತವೆ.
ಆದರೆ ಜನ್ಮ ನೀಡಿದ ತಂದೆ ,ತಾಯಿ ಪಾಲಕರನ್ನು ಮುಪ್ಪಿನ ಅವಸ್ಥೆಯಲ್ಲಿ ಮಕ್ಕಳು, ಮೊಮ್ಮಳು,ಬಂಧುಬಳಗಗಳೊಂದಿಗೆ ಆತ್ಮೀಯವಾಗಿ ಬೆರೆತು ಕುಟುಂಬದ ಇತರ ಸದಸ್ಯರೊಂದಿಗೆ ಇದ್ದು ಜೀವನ ಕಳೆದು ಅಂತಿಮ ಘಟ್ಟ ತಲುಪುವದು ಮುಪ್ಪಿನ ಜೀವನ ಸಾರ್ಥಕ ಮತ್ತು ಸಮಾಧಾನಕರವಾದ ಸಂಗತಿಯಾಗಿದೆ.
ಆದರೆ ಹೆತ್ತ ತಂದೆ ತಾಯಿಯವರನ್ನು ಅವರ ಮಕ್ಕಳು ಅದಾವುದೋ ಕಾರಣದಿಂದ ಹಿರಿಯರಾದ ಅವರನ್ನು ಮುಪ್ಪಿನ ಅವಸ್ಥೆಯಲ್ಲಿ ಅವರ ಮನಸ್ಸಿನ ವಿರುದ್ಧವಾಗಿ ವೃದ್ಧಾಶನಗಳಿಗೆ ತಳ್ಳಿ ಬಿಡುತ್ತಾರೆ.
ಇದು “ಅಮಾನವಿಯ” ಕೃತ್ಯ. ಹೀಗಾಗಿ ದುಡಿದು ತಿನ್ನದೆ ಕುಟುಂಬದಲ್ಲಿಯ ಹೆಂಡತಿ ಮಕ್ಕಳು, ಮುಪ್ಪಿನ ತಂದೆ ತಾಯಿಯನ್ನು ಕೂಡ ನಿರ್ವಹಣೆ ಮಾಡಲ್ಲ ಸೋಮಾರಿಗಳು ವೃದ್ಧಾಶ್ರಮಗಳಿಗೆ ತಳ್ಳಿ ಸರ್ಕಾರದಿಂದ ಉಚಿತವಾಗಿ ಕೊಟ್ಟ ಅಕ್ಕಿ, ಜೋಳ, ಬೇಳೆ, ಸಕ್ಕರೆ, ಗೋದಿ ಜೀವನೋಪಾಯಕ್ಕೆ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ರೂ. 2000/- ಹಣದಿಂದ ಜೀವನ ನಡೆಸುತ್ತಾರೆ.
ಇನ್ನು ಹೊರ ದೇಶದಲ್ಲಿ ಕೆಲಸ ಮಾಡುವವರು ತಂದೆ ತಾಯಿಯವರನ್ನು ಇಂತಹ ವೃದ್ಧಾಶ್ರಮಗಳಿಗೆ ತಳ್ಳಿ ತಮ್ಮ ಹೆಂಡಿರು ಮಕ್ಕಳೊಂದಿಗೆ ಆರಾಮಾಗಿ ಇರುತ್ತಾರೆ. ತಂದೆ ತಾಯಿ ಸತ್ತರು ಕೂಡ ನೋಡಲು ಬರದಂತಹ ಕ್ರೂರಿ ವ್ಯಕ್ತಿತ್ವ ಹೊಂದಿರುತ್ತಾರೆ ಈ ಎಲ್ಲಾ ಅಂಶಗಳ ಹಿನ್ನೆಲೆಯಲಿ ರಾಜ್ಯದಲ್ಲಿಯ ವೃದ್ಧಾಶ್ರಮಗಳಿಗೆ ತಿಲಾಂಜಲಿ ಹೇಳಿ ಮುಚ್ಚಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.