ರಾಜ್ಯದ ರೈತರಿಗೆ ಕಳಪೆ ಮಟ್ಟದ ಸ್ಪ್ರೀಂಕ್ಲರ್ ಪೈಪ್ ಪೂರೈಕೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ರೈತರ ಆಗ್ರಹ

ವಿಜಯಪುರ :ಜು.8: ಕಳಪೆ ಮಟ್ಟದ ತುಂತುರು ನೀರಾವರಿ ( ಸ್ಪಿಂಕ್ಲರ್ ಪೈಪ್ ) ಉಪಕರಣಗಳನ್ನು ರಾಜ್ಯದ ರೈತರಿಗೆ ಪೂರೈಕೆ ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಅಖಂಡ ಕರ್ನಾಟಕ ರೈತ ಸಂಘ (ರಿ) ವಿಜಯಪುರ ಜಿಲ್ಲಾ ಘಟಕ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಮಾತನಾಡಿ, ಪ್ರಸ್ತಕ ಸಾಲಿನ 2022-23 ಕರ್ನಾಟಕ ರೈತರಿಗೆ ಸಂಪೂರ್ಣ ಕಳಪೆ ಮಟ್ಟದ ತುಂತುರು ನೀರಾವರಿ (ಸ್ಪಿಂಕ್ಲರ್ ಪೈಪ್) ಉಪಕರಣಗಳನ್ನು ತೋಟಗಾರಿಕೆಯಲ್ಲಿ ಇಲಾಖೆಯಲ್ಲಿ ನೊಂದಾಯಿತ ಕಂಪನಿಗಳು ಒದಗಿಸದೇ ಉಪಕರಣಗಳಲ್ಲಿ ಸುಮಾರು 700 ಕೋಟಿಗಳಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣವನ್ನು ಲಪಟಾಯಿಸಿದ್ದಾರೆಂಬುದು ರೈತರ ಅಪಾಧನೆ ಆಗಿದೆ . (ಸಿಂಕ್ಲರ್ ಪೈಪ್) ಗಳು ಸಂಪೂರ್ಣ ಕಳಪೆ ಮಟ್ಟದ ಆಗಿದೆ . ಇದರಿಂದ ನಮ್ಮ ರಾಜ್ಯದ ರೈತರಿಗೆ ತುಂಬಾ ಅನ್ಯಾಯ ಜೊತೆಗೆ ಮೋಸ ಎಸಗಿದ್ದಾರೆ . ಈ ಎಲ್ಲ ಅವ್ಯವಹಾರಗಳಿಗೆ ಕೃಷಿ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಶಾಮೀಲ ಆಗಿದ್ದಾರೆ ಎಂಬುದು ಸಂಸೆ ಇದೆ . ಈ ಕುರಿತು ಹಲವಾರು ರೈತ ಸಂಘಟನೆಗಳು ಮತ್ತು ( ಸ್ಪಿಂಕ್ಲರ್ ಪೈಪ್ ) ಗಳನ್ನು ತೆಗೆದುಕೊಂಡ ರೈತರು ವಿಡಿಯೋ ಮಾಡಿದರ ಜೊತೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟ ಮಾಹಿತಿಯು ಇದೆ . ಆದರೆ ಇಲ್ಲಿ ” ಬೇಲಿ ಎದ್ದು ಹೊಲ ಮೆಯುವಂತೆ ಆಗಿದೆ ” ಅಂದರೆ ಕೃಷಿ ಇಲಾಖೆ ಸುಮಾರು ಅಧಿಕಾರಿಗಳು ಮತ್ತು ತೋಟಗಾರಿಕೆಯಲ್ಲಿ ನೋಂದಾಯಿತ ಕಂಪನಿಗಳು ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣವನ್ನು ಸುಮಾರು ವರ್ಷಗಳಿಂದ ಕೊಳ್ಳೆ ಹೊಡೆಯುತ್ತಿದ್ದಾರೆ.
ಆದ್ದರಿಂದ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತುಂತುರು ನೀರಾವರಿ ಉಪಕರಣಗಳು ಪೂರೈಸುತ್ತಿರುವ ಎಲ್ಲ ಕಂಪನಿಗಳ ಮೇಲೆ ತನಿಖೆ ಮಾಡಿ ತುಂತುರು ನೀರಾವರಿ ಉಪಕರಣಗಳ ಮಾದರಿಯನ್ನು ಮತ್ತು ಇದೆ ಪೈಪಿನ ಕಚ್ಚಾ ವಸ್ತುಗಳನ್ನು ಕಲೆ ಹಾಕಿ ಸಂಬಂಧಪಟ್ಟ ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿರುವ ಸಿ.ಐ.ಪಿ.ಇ.ಟಿ.ಗೆ ಕಳುಹಿಸಿಕೊಟ್ಟು ಗುಣಮಟ್ಟ ಪರಿಶೀಲನೆ ಮಾಡಬೇಕು . ಮತ್ತು ತುಂತುರು ನೀರಾವರಿ ಉಪಕರಣಗಳನ್ನು ಒದಗಿಸಿರುವ ನೋಂದಾಯಿತ ಎಲ್ಲ ಕಂಪನಿಗಳನ್ನು ಬ್ಲಾಕ್ ಲೀಸ್ಟ ಮಾಡಿ ಕಾನೂನಾತ್ಮಕ ಕ್ರಮ ಕೈಕೊಂಡು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಲಪಟಾಯಿಸಿರುವ ಸರ್ಕಾರದ ಹಣವನ್ನು ವಾಪಸು ಪಡೆದು ಒಳ್ಳೆಯ ಗುಣಮಟ್ಟದ ” ತುಂತುರು ನೀರಾವರಿ ಉಪಕರಣಗಳನ್ನು ಒದಗಿಸಿ ರಾಜ್ಯದ ರೈತರಿಗೆ ನ್ಯಾಯ ಒದಗಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ವಿಜಯಪುರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಾದ ಲಾಲಸಾಬ ಹಳ್ಳೂರ, ವಿಠ್ಠಲ ಬಿರಾದಾರ, ರ್ಯಾವಪ್ಪಗೌಡ ಪೋಲೇಶಿ, ಮಲಿಗೆಪ್ಪ ಸಾಸನೂರ, ಶೇಖಪ್ಪ ಮುರಡಿ, ರಾಮಣ್ಣ ಮನ್ಯಾಳ, ಹೊನಕೇರಪ್ಪ ತೆಲಗಿ ಬ.ಬಾಗೇವಾಡಿ ತಾಲೂಕ ಉಪಾಧ್ಯಕ್ಷರು, ಯಮನಪ್ಪಗೌಡ ಪಾಟೀಲ,ಸಂತೋಷ ಸಾಸನೂರ, ಬಸಪ್ಪ ಸಂಕನಾಳ, ಸಂತೋಷ ಬಿರಾದಾರ, ಸುಭಾಸ ಬಿರಾದಾರ, ಮಾದೇವಪ್ಪ ಬಿರಾದಾರ, ಮುತ್ತಪ್ಪ ಸಂಕನಾಳ, ಈರಪ್ಪ ತೇಲಿ ಸುಮಾರು 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.