ರಾಜ್ಯದ ಮೂರು ನಗರಗಳಲ್ಲಿ ಜಿಯೋ 5ಜಿ ಸೇವೆ

ಬೆಂಗಳೂರು, ಮಾ ೧೬- ರಾಜ್ಯದ ಈ ಮೂರು ನಗರಗಳಲ್ಲಿ ಜಿಯೋ ೫ಜಿ ಸೇವೆ ಆರಂಭವಾಗಿದೆ.
ಕಾರವಾರ, ರಾಣೆಬೆನ್ನೂರು ಮತ್ತು ಹಾವೇರಿಯಲ್ಲಿ ಜಿಯೋ ಟ್ರೂ ೫ಜಿ ಸೇವೆ ನಿನ್ನೆ ಯಿಂದ ಆರಂಭಿಸಲಾಗಿದೆ.
ಭಾರತದಲ್ಲಿ ಈಗಾಗಲೇ ೫ಜಿ ಸೇವೆಯನ್ನು ಆರಂಭ ಮಾಡಲಾಗಿದ್ದು ಲಕ್ಷಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ಮೊನ್ನೆಯಷ್ಟೆ ಕರ್ನಾಟಕದ ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ತುಮಕೂರಿನಲ್ಲಿ ಜಿಯೋ ೫ಜಿ ಸೇವೆಯನ್ನು ಸ್ಥಾಪಿಸಿತ್ತು. ರಾಜ್ಯದ ಈ ೩ ನಗರಗಳು ಸೇರಿದಂತೆ ದೇಶದ ಹತ್ತು ರಾಜ್ಯಗಳ, ಒಟ್ಟು ೩೪ ಹೊಸ ನಗರಗಳಲ್ಲಿ ತನ್ನ ಜಿಯೋ ತನ್ನ ೫ಜಿ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ರಿಲಯನ್ಸ್ ಜಿಯೋದಿಂದ ೫ಜಿ ಸೇವೆಗಳನ್ನು ಆರಂಭಿಸಿದ ಇತರ ನಗರಗಳು ಹೀಗಿವೆ ಆಂಧ್ರಪ್ರದೇಶದ ಅಮಲಾಪುರಂ, ಧರ್ಮಾವರಂ, ಕವಲಿ, ತನುಕು, ತುನಿ, ವಿನುಕೊಂಡ, ಹರಿಯಾಣದ ಭಿವಾನಿ, ಜಿಂದ್, ಕೈತಾಲ್, ರೇವಾರಿ, ರೇವಾರಿ, ಹಿಮಾಚಲ ಪ್ರದೇಶದ ಧರ್ಮಶಾಲಾ, ಕಾಂಗ್ರಾ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ, ಕಥುವಾ, ಕತ್ರಾ, ಸೋಪೋರ್, ಕೇರಳದ ಅಟ್ಟಿಂಗಲ್, ಮೇಘಾಲಯದ ತುರಾ, ಒಡಿಶಾದ ಭವಾನಿಪಟ್ನಾ, ಜತಾನಿ, ಖೋರ್ಧಾ, ಸುಂದರ್‌ಗಢ, ತಮಿಳುನಾಡಿನ ಅಂಬೂರ್, ಚಿದಂಬರಂ , ನಾಮಕ್ಕಲ್, ಪುದುಕೋಟ್ಟೈ, ರಾಮನಾಥಪುರಂ, ಶಿವಕಾಶಿ, ತಿರುಚೆಂಗೋಡ್, ವಿಲುಪ್ಪುರಂ ಹಾಗೂ ತೆಲಂಗಾಣದ ಸೂರ್ಯಪೇಟ್ ನಲ್ಲಿ ಲಭ್ಯ ಇದೆ. ಇದರೊಂದಿಗೆ ದೇಶದ ೩೬೫ ನಗರಗಳಲ್ಲಿ ಜಿಯೋ ೫ಜಿ ಸೇವೆಗಳು ಲಭ್ಯ ಆಗಲಿವೆ.