
ಕಲಬುರಗಿ,ಆ.04:ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಆಗಸ್ಟ್ 5 ರಂದು ಶನಿವಾರ ಬೆಳಿಗ್ಗೆ 11.05 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ನಂತರ ಬೆಳಿಗ್ಗೆ 11.25 ಗಂಟೆಗೆ ಕಲಬುರಗಿ ನಗರದ ಎನ್.ವಿ. ಮೈದಾನದಲ್ಲಿ ಇಂಧನ ಇಲಾಖೆ ವತಿಯಿಂದ ಆಯೋಜಿಸಿರುವ “ಗೃಹ ಜ್ಯೋತಿ ಯೋಜನೆ”ಯನ್ನು ಉದ್ಘಾಟಿಸುವರು.
ಅಂದು ಸಂಜೆ 4.15 ಗಂಟೆಗೆ ಕಲಬುರಗಿಯ ಎನ್.ವಿ. ಮೈದಾನದಿಂದ ರಸ್ತೆ ಮೂಲಕ ಹೊರಟು ಸಂಜೆ 4.30 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಸಂಜೆ 4.35 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.