ರಾಜ್ಯದ ಪೌರಾಡಳಿತ ಹಾಗೂ ಹಜ್ ಸಚಿವರ ಪ್ರವಾಸ

ಕಲಬುರಗಿ,ಜು.15:ರಾಜ್ಯದ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಬೀದರದಿಂದ ರಸ್ತೆ ಮೂಲಕ ಜುಲೈ 16 ರಂದು ಸಂಜೆ 7.45 ಗಂಟೆಗೆ ಕಲಬುರಗಿಗೆ ಅಗಮಿಸಿ ಸ್ಥಳೀಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜುಲೈ 17 ರಂದು ಬೆಳಿಗ್ಗೆ 5.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹೈದ್ರಾಬಾದ್‍ಗೆ ಪ್ರಯಾಣಿಸಿ, ನಂತರ ಬೆಳಿಗ್ಗೆ 9.15 ಗಂಟೆಗೆ ಹೈದ್ರಾಬಾದ್‍ದಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.