ರಾಜ್ಯದ ಜವಳಿ ಸಚಿವರ ಪ್ರವಾಸ

ಕಲಬುರಗಿ,ಆ.19:ರಾಜ್ಯದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಬೆಂಗಳೂರಿನಿಂದ ವಿಮಾನದ ಮೂಲಕ ಆಗಸ್ಟ್ 20 ರಂದು ಭಾನುವಾರ ಮಧ್ಯಾಹ್ನ 2.40 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ನಂತರ ಅಂದು ಸಂಜೆ 4 ಗಂಟೆಗೆ ಕಲಬುರಗಿಯಲ್ಲಿ ಪಿ.ಎಮ್. ಮಿತ್ರಾ ಟೆಕ್ಸ್‍ಟೈಲ್ಸ್ ಪಾರ್ಕ್‍ಗೆ (PM MITRA Textile Park) ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಸಂಜೆ 6 ಗಂಟೆಗೆ ಕಲಬುರಗಿ ಕೆ.ಪಿ.ಟಿ.ಸಿ.ಎಲ್. ಕಚೇರಿ ಎದುರಿಗೆಯಿರುವ ಪ್ರೈಮ್ ಮಾಲ್‍ದಲ್ಲಿ ಜರುಗುವ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 9.15 ಗಂಟೆಗೆ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣಿಸುವರು.