ರಾಜ್ಯದ ಜನರಿಗೆ ಕರೆಂಟ್ ಶಾಕ್ ಪ್ರತಿ ಯೂನಿಟ್ 70 ಪೈಸೆ ಹೆಚ್ಚಳ

ಕೆಇಆರ್‌ಸಿ ಆದೇಶ
ಬೆಂಗಳೂರು,ಜೂ.೪-ರಾಜ್ಯದಲ್ಲಿ ಪ್ರತಿಮನೆಗೆ ವಾರ್ಷಿಕ ಸರಾಸರಿ ಆಧಾರದ ಮೇಲೆಗರಿಷ್ಠ ೨೦೦ ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವ ‘ಗೃಹಜ್ಯೋತಿ’ ಯೋಜನೆಯನ್ನು ಸರ್ಕಾರ ಜಾರಿ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬರೆ ಎಳೆಯಲಾಗಿದೆ.
ಪ್ರತಿ ಯೂನಿಟ್ ವಿದ್ಯುತ್‌ಗೆ ೭೦ ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಸಿದಿದೆ. ಇದರಿಂದ ರಾಜ್ಯದಲ್ಲಿ ಗ್ರಾಹಕರ ಮೇಲೆ ಮತ್ತಷ್ಟು ಹೊರೆಯಾಗುವುದು ಖಚಿತವಾಗಿದೆ.
ಜುಲೈ ೧ರಿಂದ ಗೃಹ ಜ್ಯೋತಿ ಯೋಜನೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ ೧ ರಿಂದಲೇ ಅನ್ವಯವಾಗುವಂತೆ ಹೊಸ ದರ ಜಾರಿಗೆ ಬರಲಿದೆ.ಗೃಹಜ್ಯೋತಿ ಯೋಜನೆ ಘೋಷಣೆ ಹಿನ್ನೆಲೆ ಸಂತಸದಲ್ಲಿರುವ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಿದೆ.
ಕೆಇಆರ್ ಸಿಈ ಪ್ರತಿ ಯೂನಿಟ್ ವಿದ್ಯುತ್ ದರ ೭೦ ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಮೇ ೧೨ ರಂದು ವಿದ್ಯುತ್ ದರ ಪರಿಷ್ಕರಣೆ ಮಾಡಿತ್ತು. ಜೂ.೧ ರಿಂದಲೇ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.
ಏಪ್ರಿಲ್ ೧ರಿಂದ ಹೊಸ ದರ ಅನ್ವಯ ಎಂದು ಕೆಇಆರ್ಸಿ ಹೇಳಿತ್ತು. ಚುನಾವಣೆ ಹಿನ್ನೆಲೆ ದರ ಹೆಚ್ಚಳ ಆದೇಶಕ್ಕೆ ತಡೆ ಬಿದ್ದಿತ್ತು. ಇದೀಗ ಏಪ್ರಿಲ್ ೧ ರ ಬದಲು ಜೂನ್ ೧ರಿಂದ ಹೊಸದರ ಏರಿಕೆ ಜಾರಿಯಾಗಿದೆ.
ರಾಜ್ಯ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಸಿದು ಕೊಳ್ಳುವುದು ಅಂದರೆ ಇದೇ ಇರಬೇಕು ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.

ವಿದ್ಯುತ್ ದರ ಏರಿಕೆ: ಗ್ರಾಹಕರಿಗೆ ಕರೆಂಟ್ ಶಾಕ್

  • ಪ್ರತಿ ಯೂನಿಟ್‌ಗೆ ೭೦ ಪೈಸೆ ಹೆಚ್ಚಳ
  • ಜೂನ್ ೧ರಿಂದ ಹೊಸ ದರ ಜಾರಿ
  • ಗೃಹ ಜ್ಯೋತಿ ಯೋಜನೆಯ ಜಾರಿ ಖುಷಿಯಲ್ಲಿರುವ ಗ್ರಾಹಕರಿಗೆ ಬರೆ
  • ಏಪ್ರಿಲ್ ೧ರಿಂದಲೇ ಹೊಸದರ ಜಾರಿಗೆ ಕೆಇಆರ್‍ಸಿ ನಿರ್ದರಿಸಿತ್ತು
  • ಚುನಾವಣೆ ಹಿನ್ನೆಲೆಯಲ್ಲಿ ಆದೇಶಕ್ಕೆ ತಡೆ ನೀಡಲಾಗಿತ್ತು
    ಜೂನ್ ೧ ರಿಂದಲೇ ಹೊಸ ದರ ಜಾರಿ