ರಾಜ್ಯದ ಜನತೆಗಾಗಿ ೬೧ ಕೇಂದ್ರಗಳಲ್ಲಿ ಒಂದು ಸಾವಿರಕ್ಕೂ ಮಿಕ್ಕಿ ಆಮ್ಲಜನಕ ಸಾಂದ್ರಕಗಳ ಲೋಕಾರ್ಪಣೆ

ಉಜಿರೆ, ಜೂ.೮- ಅಹಿಂಸೆಯೇಜೈನಧರ್ಮದ ಶ್ರೇಷ್ಠ ತತ್ವವಾಗಿದ್ದುಜೈನರ ಸಮಾಜ ಸೇವಾ ಕಳಕಳಿ ಶ್ಲಾಘನೀಯವಾಗಿದೆ.ಕೊರೊನಾ ನಿರ್ಮೂಲನೆಗೆ ಭಾರತೀಯಜೈನ ಸಂಘಟನೆಯಅಮೂಲ್ಯ ಮಾನವೀಯಸೇವೆ ಸ್ತುತ್ಯಾರ್ಹವಾಗಿದೆಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಭಾರತೀಯಜೈನ ಸಂಘಟನೆ (ಬಿಜೆಎಸ್) ಆಶ್ರಯದಲ್ಲಿರಾಜ್ಯದಜನತೆಗಾಗಿ ೬೧ ಕೇಂದ್ರಗಳಲ್ಲಿಒಂದು ಸಾವಿರಕ್ಕೂ ಮಿಕ್ಕಿ ಆಮ್ಲಜನಕ ಸಾಂದ್ರಕಗಳನ್ನು ವರ್ಚುವಲ್‌ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿಅವರು ಮಾತನಾಡಿದರು.

ಪ್ರಧಾನಿಯವರದಕ್ಷ ನೇತೃತ್ವದಲ್ಲಿಕೊರೊನಾ ನಿರ್ಮೂಲನೆಗೆ ರಾಜ್ಯ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ.ಜನರು ಭಯಭೀತರಾಗಬಾರದುಎಂದುಆತ್ಮವಿಶ್ವಾಸತುಂಬಿದರು.

ಜನರುಕೊರೊನಾದಿಂದ ಭಯಭೀತರಾಗದೆ, ಬೇಜವಾಬ್ದಾರಿಯಿಂದ ವರ್ತಿಸದೆಅನಾರೋಗ್ಯ ಲಕ್ಷಣಕಂಡು ಬಂದತಕ್ಷಣಆಸ್ಪತ್ರೆಗೆದಾಖಲಾಗಬೇಕುಎಂದುಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರುದೇಶದಜನತೆಗೆ ಸಂದೇಶ ನೀಡಿದ್ದಾರೆ. ಅವರ ಸಲಹೆಯನ್ನು ಚಾಚೂ ತಪ್ಪದೆಎಲ್ಲರೂಪಾಲಿಸಿ ಕೊರೊನಾ ಮುಕ್ತ ಸಮಾಜ ರೂಪುಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾರೈಸಿದರು.

ರಾಜ್ಯದಜನತೆಯ ಪರವಾಗಿ ಮುಖ್ಯಮಂತ್ರಿಯವರನ್ನು ಹೆಗ್ಗಡೆಯವರು ಅಭಿನಂದಿಸಿ ಗೌರವಿಸಿದರು.

ಧರ್ಮಾಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಾಂತಿಲಾಲ್ ಮುತ್ತಾರ ನೇತೃತ್ವದಲ್ಲಿಭಾರತೀಯಜೈನ ಸಂಘಟನೆಯ ಸೇವೆ ದೇಶಕ್ಕೆ ಮಾದರಿಯಾಗಿದೆ.ಪ್ರತಿರಾಜ್ಯದಲ್ಲಿಯೂಇಂತಹ ಸೇವಾ ಘಟಕಗಳಿರಬೇಕು ಎಂದುಅವರು ಹೇಳಿದರು.ದೇಶದಲ್ಲಿ ನೆರೆ-ಬರಗಾಲ ಸಂದರ್ಭದಲ್ಲಿ ಬಿಜೆಎಸ್‌ನ ಸೇವೆಯನ್ನುಹೆಗ್ಗಡೆಯವರು ಶ್ಲಾಘಿಸಿದರು.

ಗ್ರಾಮೀಣ ಪ್ರದೇಶದಲ್ಲಿಯೂಕೊರೊನಾ ಮಾಯಾಸುರನಂತೆ ವೇಗವಾಗಿ ಹರಡುತ್ತಿರುವುದುಆತಂಕಕಾರಿಯಾಗಿದೆ.ಆದರೆ,  ಈಗ ಸರ್ಕಾರದ ಸೇವಾ ಕಾರ್ಯದಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದೆ.ಕೊರೊನಾದಿಂದ ಜನರು ಭಯಭೀತರಾಗದೆ, ಬೇಜವಾಬ್ದಾರಿಯಿಂದ ವರ್ತಿಸದೆ, ಮೂಡನಂಬಿಕೆಗೆ ಬಲಿಯಾಗದೆ,ರೋಗದ ಲಕ್ಷಣಕಂಡು ಬಂದತಕ್ಷಣಆಸ್ಪತ್ರೆಗೆದಾಖಲಾಗಬೇಕು. ದೇಶದೆಲ್ಲೆಡೆಕೊರೊನಾ ಸಂಪೂರ್ಣ ನಿರ್ಮೂಲನೆಯಾಗಿಆದಷ್ಟು ಬೇಗ ಕೊರೊನಾ ಮುಕ್ತ ರಾಜ್ಯ ಹಾಗೂ ಕೊರೊನಾ ಮುಕ್ತ ದೇಶವಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.

ರಾಜ್ಯದ ಪರವಾಗಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಮುಖ್ಯಮಂತ್ರಿಯವರು ಸನ್ಮಾನಿಸಿದರು.

ಣಮೋಕಾರ ಮಂತ್ರ ಪಠಣದ ಬಳಿಕ ಬಿಜೆಎಸ್ ನರಾಷ್ಟ್ರೀಯಅಧ್ಯಕ್ಷರಾಜೇಂದ್ರಜಿ ಲಂಕರ್ ಸ್ವಾಗತಿಸಿದರು.ಬಿಜೆಎಸ್ ನ ಸ್ಥಾಪಕ  ಶಾಂತಿಲಾಲ್ ಮುತ್ತ ಸಂಘಟನೆಯ ಸೇವಾ ಕಾರ್ಯಗಳ ಸಮಗ್ರಮಾಹಿತಿ ನೀಡಿದರು.

ಭಾರತೀಯಜೈನ ಸಂಘಟನೆಯಕರ್ನಾಟಕರಾಜ್ಯಘಟಕದಅಧ್ಯಕ್ಷಮಹಾವೀರಚಂದ್ ಜಿ ಪರೆಕ್‌ಧನ್ಯವಾದ ಸಲ್ಲಿಸಿದರು.

ಧರ್ಮಸ್ಥಳದ ಡಿ. ಸುರೇಂದ್ರಕುಮಾರ್, ಬಿಜೆಎಸ್ ನ ಓಂಪ್ರಕಾಶ್‌ಲುನಾವತ್ ಮತ್ತುಗೌತಮ್‌ಜಿ ಬಫ್ನಾ ಉಪಸ್ಥಿತರಿದ್ದರು.