ರಾಜ್ಯದ ಅಲ್ಪಸಂಖ್ಯಾತರಿಗೆ 2 ಬಿ ಮೀಸಲಾತಿ ತೆಗೆದು ಹಾಕಿದ ಕ್ರಮ ಸರಿಯಲ್ಲ

ಜೇವರ್ಗಿ:ಮಾ.27: ಶಿಕ್ಷಣ ಹಾಗೂ ಉದ್ಯೋಗದಿಂದ ಹಿಂದಿಡುವ ಪ್ರಯತ್ನ ಬಿಜೆಪಿ ಪಕ್ಷ ಮಾಡುತ್ತಿದ್ದು ಮುಸಲ್ಮಾನರು ರಾಜ್ಯದಲ್ಲಿ ಆರ್ಥಿಕ ಶೈಕ್ಷಣಿಕ ಉದ್ಯೋಗದಲ್ಲಿ ಅತಿ ಹಿಂದುಳಿದಿದ್ದು ಇದೆ ಆದರೆ ಮೀಸಲಾತಿ ಹೆಚ್ಚು ಮಾಡುವ ಬದಲು ತೆಗೆದುಹಾಕಿ ಅನ್ಯಾಯ ಮಾಡುತ್ತಿರುವುದು ಖಂಡನೀಯ.ಎಂದು ಅಲ್ಪಸಂಖ್ಯಾತರ ಸಮುದಾಯದ ಮುಖಂಡ ಇಬ್ರಾಮ್ ಪಟೇಲ್ ಮಾಲಿ ಪಾಟೀಲ್ ಯಾಳವಾರ ತಿಳಿಸಿದ್ದಾರೆ
ಸಂವಿಧಾನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿ ಇಂದು ಅಧಿಕಾರ ದುರುಪಯೋಗ ಮಾಡ್ಕೊಂಡು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿ ಖುಷಿ ಪಡುತ್ತಿರುವುದು ತುಂಬಾ ನೋವಿನ ಸಂಗತಿ ಮೋದಿಜಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಳುತ್ತಾರೆ ರಾಜ್ಯದಲ್ಲಿ ಒಂದು ಸಮಾಜಕ್ಕೆ ಅನ್ಯಾಯ ಮಾಡುತ್ತಿರುವುದು ಕಾಣುತ್ತಿಲ್ಲ ಇದೇನಾ ಸಬಕಾ ಸಾಥ್ ಸಬಕಾ ವಿಕಾಸ್ ಕೇಳುತ್ತೇನೆ ನಿಮಗೆ ನಿಜವಾದ ಸಬಕಾ ಸಾಥ್ ಸಬಕಾ ವಿಕಾಸ್ ಅನ್ನೊ ಕಾಳಜಿ ಇದ್ದರೆ ತಕ್ಷಣ ಈ ತಾರತಮ್ಯದ ನಿರ್ಧಾರ ತಡೆಹಿಡಿದು ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಿಸುವ ಕೆಲಸ ಆಗಲಿ ಇಲ್ಲದೆ ಇದ್ದರೆ ನಾವುಗಳು ಕಾನೂನು ಹೋರಾಟದ ಮುಖಾಂತರ ನಮ್ಮ ಹಕ್ಕು ಪಡಿಯಬೇಕು ಮತ್ತು ಸಂದರ್ಭ ಬಂದರೆ ಇಡೀ ರಾಜ್ಯದ್ಯಂತ ಚಳುವಳಿ ಕೂಡ ಮಾಡಲು ತಯಾರಿ ನಡೆಸಬೇಕಾಗುತ್ತದೆ ನಾವು ಯಾರ ಮೀಸಲಾತಿಯ ವಿರೋಧ ಮಾಡಲ್ಲ ಇನ್ನೊಬ್ಬರ ಹಾಗೆ ನಮಗೂ ಕೂಡ ಮೀಸಲಾತಿ ಕೇಳುವ ಸಂವಿಧಾನದಲ್ಲಿ ಹಕ್ಕು ಇದೆ ಅದನ್ನು ಕೇಳುತ್ತೇವೆ ಸಂದರ್ಭ ಬಂದರೆ ಹೋರಾಟ ಕೂಡ ಮಾಡುತ್ತೆವೆ ಎಂದು ತಿಳಿಸಿದ್ದಾರೆ