
ಮಾನ್ವಿ ಮೇ ೦೮ :- ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಮಾನ್ವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ ಪರ ಮಾಜಿ ಸಚಿವ ರಮೇಶ ಜಾರಕಿಹೊಳ್ಳಿ ಮತಯಾಚನೆ ಮಾಡಿ ಮಾತನಾಡಿ ಮುಂದಿನ ಅವಧಿಯಲ್ಲಿಯೂ ದೇವರ ಆರ್ಶೀವಾದದಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷವು ೧೨೫ ರಿಂದ ೧೩೦ ಸ್ಥಾನಗಳಲ್ಲಿ ಗೆಲುವು ಪಡೆಯಲಿದ್ದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಯಾಗಲಿದ್ದಾರೆ, ಬಿ.ವಿ.ನಾಯಕರವರಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಲಾಗಿತ್ತು ಮಂತ್ರಿಯನ್ನಾಗಿ ಮಾಡುವ ಭರವಸೆ ನೀಡಿದ್ದರು ಇವರು ಕಾಂಗ್ರೇಸ್ ಪಕ್ಷಕ್ಕೆ ನಿಷ್ಠರಾಗಿ ಇದ್ದಿದ್ದಕ್ಕೆ ಇಂದು ಪಕ್ಷದಿಂದ ಅನ್ಯಾಯವಾಗಿದ್ದು ಅವರನ್ನು ಬಿಜೆಪಿ ಪಕ್ಷಕ್ಕೆ ಕರೆತಂದಿದ್ದೇನೆ ನೀವು ಮತ ಹಾಕುವ ಮೂಲಕ ನ್ಯಾಯ ಕೊಡಿಸಬೇಕು ಎಂದು ಮತಯಾಚನೆ ಮಾಡಿದರು.
ಬಿಜೆಪಿ ಪಕ್ಷದಂತ ಒಳೆಯ ಪಕ್ಷ ಯಾವುದು ಇಲ್ಲ ದಲಿತ ಸಮುದಾಯ ಸೇರಿ ಸಮಾಜದ ಎಲ್ಲಾ ಜಾತಿಯವರಿಗೂ ಕೂಡ ಸಂವಿಧಾನದಲ್ಲಿ ನೀಡಿರುವ ಎಲ್ಲಾ ಸೌಲಭ್ಯಗಳು ಕೂಡ ಸಮಾನವಾಗಿ ದೊರೆಯಲ್ಲಿದೆ
ನಮ್ಮ ದೇಶದ ಸಂವಿಧಾನದಲ್ಲಿ ಮುಸ್ಲಿಂ ಸಮಾಜದವರಿಗೂ ಕೂಡ ಸಮಾನವಾದ ಸ್ಥಾನವನ್ನು ನೀಡಲಾಗಿದೆ ಆದರೆ ಇಂದು ಕಾಂಗ್ರೇಸ್ ಪಕ್ಷ ತನ್ನ ಮತ ಬ್ಯಾಂಕ್ ಗೊಸ್ಕರ ಬಿಜೆಪಿ ಪಕ್ಷವನ್ನು ಮುಸ್ಲಿಂ ವಿರೋಧಿ ಕೋಮುವಾದಿ ಪಕ್ಷ ಎಂದು ಬಿಂಬಿಸುತ್ತ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಮುಖಂಡ ಮಾನಪ್ಪ ನಾಯಕ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮುಖಂಡರು ಇದ್ದರು..