ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ, ಸಂತೋಷ ಕಕಮರಿ ಅಧ್ಯಕ್ಷರಾಗಿ ಆಯ್ಕೆ

ಅಥಣಿ :ಆ.2: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಯತಿ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಅಥಣಿ ಗ್ರಾಮೀಣ ಪಂಚಾಯತ್ ( ಸಂಕ್ಕೋನಟ್ಟಿ) ಬಿಜೆಪಿ ತೆಕ್ಕೆಗೆ ವಾಲಿದೆ, ಮಾಜಿ ಸಚಿವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಈ ಕ್ಷೇತ್ರದ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ ಶಿಷ್ಯ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂತೋಷ ಕಕಮರಿ ಅಧ್ಯಕ್ಷರಾಗಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೂಪಾ ಸೋನಕರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ,
ಅತಿಹೆಚ್ಚು ಜನಸಂಖ್ಯೆ ಹಾಗೂ 56 ಸದಸ್ಯ ಹೊಂದಿರುವ ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯತಿಗೆ ಮಂಗಳವಾರ ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು
,ಕಾಂಗ್ರೇಸ ಬೆಂಬಲಿತ ಅಭ್ಯರ್ಥಿ ಶಂಕರ ಗಡದೆ 24 ಪಡೆದು ಪರಾಭವಗೊಂಡರು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂತೋಷ ಕಕಮರಿ 31 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಒಂದು ಮತ ಅಸಿಂದುವಾಗಿದೆ, ಉಪಾದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ ಬೆಂಬಲಿತ ಅಭ್ಯರ್ಥಿ ರೂಪಾ ಸೋನಕರ 30 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ .
ಈ ವೇಳೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ಗೆದ್ದ ಅಭ್ಯರ್ಥಿ ಸಂತೋಷ ಕಕಮರಿ ಅವರಿಗೆ ಸನ್ಮಾನಿಸಿ ಮಾತನಾಡಿ ನನ್ನ ಅವಧಿಯಲ್ಲಿ ಮತ ಕ್ಷೇತ್ರದಲ್ಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಕೆಲಸ ಮಾಡಿದ್ದೇನೆ ಅದೆ ರೀತಿಯಾಗಿ ಪಂಚಾಯಿತಿ ಅದ್ಯಕ್ಷರಾಗಿ ಆಯ್ಕೆಯಾದ ಸಂತೋಷ ಅವರಿಗೂ ಅದೆ ರೀತಿಯಾಗಿ ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳುತ್ತೇನೆ ಎಂದರು,
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ ಕಕಮರಿ ಮಾತನಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭದ ಮಾತಲ್ಲ. ಇಲ್ಲಿ ಸದಸ್ಯರ ಹಾಗೂ ಜನರ ನಂಬಿಕೆ ಬಹಳ ಮುಖ್ಯ, ನಮ್ಮ ನಾಯಕರಾದ ರಮೇಶ ಜಾರಕಿಹೋಳಿ ಹಾಗೂ ಮಹೇಶ ಕುಮಠಳ್ಳಿಯವರ ಮಾರ್ಗದರ್ಶನದೊಂದಿಗೆ ನನ್ನ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಹಾಗೂ ಒಳ್ಳೆಯ ಕೆಲಸಗಾರನಾಗಿ ಕೆಲಸ ಮಾಡುತ್ತೇನೆ, ನನ್ನ ಎರಡುವರೆ ವರ್ಷದ ಅಧಿಕಾರಾವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕ್ರಮಗಳನ್ನು ಕೈಗೆuಟಿಜeಜಿiಟಿeಜಳ್ಳುತ್ತೇನೆ, ಮುಂಬರುವ ದಿನಮಾನದಲ್ಲಿ ಗ್ರಾಮದ ಎಲ್ಲ ಅಭಿವೃದ್ದಿ ಕೆಲಸಗಳನ್ನು ತ್ವರಿತವಾಗಿ ಮಾಡಿ, ನನಗೆ ಬೆಂಬಲಿಸಿದ ಸದಸ್ಯರ ಹಾಗೂ ಜನತೆಯ ವಿಶ್ವಾಸ ಉಳಿಸಿಕೊಳ್ಳುವೆ, ಎಂದ ಅವರು ಈ ಗೆಲುವು ನನ್ನದಲ್ಲ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಈ ಕ್ಷೇತ್ರದ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಹಾಗೂ ಸಂಕ್ಕೋನಟ್ಟಿ ಗ್ರಾಮದ ಹಿರಿಯರು, ಮುಖಂಡರು, ಯುವಕರು ಹಾಗೂ ಗ್ರಾಪಂನ ಸರ್ವ ಸದಸ್ಯರ ಸಹಕಾರದಿಂದ ನಾನು ಆಯ್ಕೆಯಾಗಿದ್ದೇನೆ, ಇವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ ಎಂದರು,
ಚುನಾವಣಾ ಅಧಿಕಾರಿಯಾಗಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಮತ್ತು ಸಹಾಯಕ ಚುನಾವಣಾ ಅಧಿಕಾರಿಯಾಗಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾಷ್ ಹುಬ್ಬಳ್ಳಿ ಕಾರ್ಯನಿರ್ವಹಿಸಿದರು.
ಈ ವೇಳೆ ಮುಖಂಡರಾದ ಮಹಾವೀರ ಪಡನಾಡ ಧರೇಪ್ಪಾ ಠಕ್ಕಣ್ಣವರ, ಗೀರಿಶ ಬುಟಾಳಿ, ರವಿ ಪೂಜಾರಿ, ಮಲ್ಲಿಕಾರ್ಜುನ ಅಂದಾನಿ, ರೇಣುಕಾ ರವಿ ಬಕಾರಿ, ಅವಿನಾಶ ಹಣಮಾಪುರೆ, ಪ್ರಕಾಶ ನಾಯಿಕ, ಬಸವರಾಜ ದರೂರ, ಅಪ್ಪು ಹಲ್ಯಾಳ, ಸಿದ್ದು ಪಾಟೀಲ, ಸದಾಶೀವ ಕೊಂಪಿ, ರಾಜು ನಾಯಿಕ, ಕುಮಾರ ಪಡಸಲಗಿ, ಪ್ರಕಾಶ ಚನ್ನಣ್ಣವರ, ಸಂಗಮೇಶ ಇಂಗಳಿ, ಮಹಾಂತೇಶ ನಾಯಿಕ, ರವಿ ಮಗದುಮ್, ಸಂತೋಷ ಗಾಳಿ, ಸುದೀಪ ನಾಯಿಕ ಸೇರಿದಂತೆ ಹಲವರು ಉಪಸ್ಥೀತರಿದ್ದರು.

ವಿಜಯೋತ್ಸವ:
ಸಂಕೋನಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಮಾಜಿ ಸಚಿವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಈ ಕ್ಷೇತ್ರದ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ ಬೆಂಬಲಿತ ಬಿಜೆಪಿ ಅಭ್ಯರ್ಥಿ ಸಂತೋಷ ಕಕಮರಿ ಅಧ್ಯಕ್ಷರಾಗಿ ಆಯ್ಕೆಯಾದ ಘೋಷಣೆಯಾಗುತ್ತಿದಂತೆ ಸ್ಥಳಕ್ಕೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ಆಗಮಿಸಿ ಅಭಿನಂದಿಸಿದರು, ನಂತರ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.