ರಾಜ್ಯದಲ್ಲೇ ಕೋವಿಡ್ ಲಸಿಕೆ ಪಡೆದ ಪ್ರಮಾಣದಲ್ಲಿ ವಿಜಯಪುರ ನಗರ ಪ್ರಥಮಃ ಯತ್ನಾಳ

ವಿಜಯಪುರ, ಮೇ.2-ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳರವರು ನಗರಾದ್ಯಂತ ಉಚಿತವಾಗಿ ಪ್ರಧಾನಿ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಂಡಿದ್ದು, ಅದರಂತೆ ಇಂದು ವಾರ್ಡ ನಂ-21, ಕನಕದಾಸ ಬಡಾವಣೆ ಶ್ರೀ ಹನುಮಾನ ದೇವಸ್ಥಾನದ ಆವರಣ ಹಾಗೂ ವಾರ್ಡ ನಂ-26, ದಿವಟಗೇರಿಗಲ್ಲಿ ರಾಯರ ಮಠದ ಹತ್ತಿರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
18 ವರ್ಷ ಮೇಲ್ಪಟ್ಟ ಎಲ್ಲ ಯುವಕರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಿ, ಇದರ ಬಗ್ಗೆ ಕುಲಂಕುಶವಾಗಿ ಮಾಹಿತಿ ಪಡೆದು ಮೇ 31 ರ ಒಳಗಾಗಿ ನಗರದ ಎಲ್ಲ 18 ವರ್ಷ ಮೇಲ್ಪಟ್ಟ ಯುವಕರಿಗೂ ಲಸಿಕೆ ಹಾಕಿಸಿ ಶೇ 100% ರಷ್ಟು ಲಸಿಕೆ ಪಡೆದ ವಿಜಯಪುರ ನಗರವಾಗಿ ಮಾಡುವಂತಹ ಕನಸಿದೆ ಎಂದರು.
ಈ ಕೋವಿಡ್ ಮಹಾಮಾರಿ ಎರಡನೇ ಅಲೆ ಅತ್ಯಂತ ಭಯಾನಕಾಗಿದೆ, ಮೂರನೇ ಅಲೆ ಬರುವದಕ್ಕಿಂತ ಮೊದಲು ನಾವೆಲ್ಲ ಜಾಗರೂಕರಾಗಿರಬೇಕು, ಎಚ್ಚರ ವಹಿಸಬೇಕು ಹೀಗಾಗಿ ಎಲ್ಲರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ, ಬಿಸಿ ನೀರು, ಕಷಾಯ ಕುಡಿಯಿರಿ, ಮಾಸ್ಕ್ ಧರಿಸಿ, ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕರೋನ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮ ವಹಿಸಿ, ದೇಶದಲ್ಲಿ ಕೆಲವರು ನಿರಂತರವಾಗಿ ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ವ್ಯವಸ್ಥಿತವಾಗಿ ರಾಜಕೀಯ ಮಾಡುತ್ತಿದ್ದಾರೆ ಆದರೆ ಈ ಕೀಳು ಮಟ್ಟದ ವ್ಯವಸ್ಥೆಯಿಂದ ಅವರು ಹೊರಬರಬೇಕು ಎಂದರು.
28 ದಿನಗಳ ಹಿಂದೆ ನಾನು ಮೊದಲ ಡೋಸ್ ಲಸಿಕೆ ಪಡೆದುಕೊಂಡ ಸಂದರ್ಭದಲ್ಲಿ ನಗರದಲ್ಲಿ ಕೇವಲ 3% ಲಸಿಕೆ ಹಂಚಿಕೆಯಾಗಿತ್ತು, ಆದರೆ ನಾವು ನಗರದಲ್ಲಿ ಮನೆ ಮನೆಗೆ ಲಸಿಕೆ ಅಭಿಯಾನ ಪ್ರಾರಂಭ ಮಾಡಿದಾಗಿನಿಂದ ನಾನು ಎರಡನೇ ಹಂತದ ಲಸಿಕೆ ಪಡೆಯುವಷ್ಟರಲ್ಲಿ ನಗರವು ಶೇಖಡಾ 57% ತಲುಪಿದೆ ಇಡೀ ಕರ್ನಾಟಕದಲ್ಲೇ ವಿಜಯಪುರ ನಗರ ನಂ.1 ಇದೆ ಎಂದರು.
ಜಗತ್ತಿನಲ್ಲಿ ಇಸ್ರೇಲ್ 100% ಲಸಿಕೆ ಪಡೆದ ದೇಶವಾಗಿ, ಮಾಸ್ಕ ರಹಿತವಾದಂತಹ ಮೊದಲ ದೇಶವಾಗಿದ್ದು ಮಾಸ್ಕ ರಹಿತವಾದಂತಹ ವಾತಾವಾರಣ ಸೃಷ್ಟಿಯಾಗಿದೆ, ಕಾರಣ ಅಲ್ಲಿನ ಸಾರ್ವಜನಿಕರು ಜಾಗೃತರಾಗಿದ್ದಾರೆ ಇದೇ ಮಾದರಿಯಲ್ಲಿ, ರೋಗದಿಂದ ಪಾರಾಗಲು ಎಲ್ಲರು ಸಹ ಲಸಿಕೆ ಪಡೆದುಕೊಂಡು, ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಹಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ವಿಜಯಪುರ ನಗರವು ಸಹ 100% ರಷ್ಟು ಲಸಿಕೆ ಹಂಚಿಕೆಯಾಗಿ ಮಾಸ್ಕ ರಹಿತ ನಗರವಾಗಿ ನಿರ್ಮಾಣವಾಗಲಿ ಎಂದರು.
ವಿಜಯಪುರ ನಗರ ಮತಕ್ಷೇತ್ರವು ನೂರಕ್ಕೆ ನೂರರಷ್ಟು (100%) ಲಸಿಕಾ ಗುರಿ ಸಾಧಿಸುವ ನಿಟ್ಟಿನಲ್ಲಿ ಸತತವಾಗಿ ಉಚಿತ ಲಸಿಕಾ ಅಭಿಯಾನವನ್ನು ಈ ಕೆಳಕಂಡ ದಿನಾಂಕಗಳಂದು ವಿವಿಧ ಬಡಾವಣೆ / ಕಾಲನಿಗಳಲ್ಲಿ ಹಮ್ಮಿಕೊಂಡಿದ್ದು, ಸುತ್ತಮುತ್ತಲಿನ ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿರುತ್ತಾರೆ.
ದಿ.02 ಬೆಳಿಗ್ಗೆ 10 ಕ್ಕೆ ವಾರ್ಡ ನಂ-35, ರಾಜಕುಮಾರ ಲೇಔಟ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆವರಣ. ಬೆಳಿಗ್ಗೆ 11:00 ಕ್ಕೆವಾರ್ಡ ನಂ-4, ಸರ್ಕಾರಿ ಶಾಲೆ ನಂ.51 ಭೂತನಾಳ ತಾಂಡಾ. 03-05-2021 (ಸೋಮವಾರ) – ಬೆಳಿಗ್ಗೆ 10:00 ಕ್ಕೆ ವಾರ್ಡ ನಂ-34 ರ ಅಡಕಿಗಲ್ಲಿಯ ಆಯುರ್ವೇದ ಕಾಲೇಜ ಆವರಣ. ಬೆಳಿಗ್ಗೆ 11:00 ಕ್ಕೆವಾರ್ಡ ನಂ-8, ಶಿರಾಳಶೆಟ್ಟಿ ಓಣಿ. 04-05-2021 (ಮಂಗಳವಾರ) – ಬೆಳಿಗ್ಗೆ 10:00 ಕ್ಕೆ ವಾರ್ಡ ನಂ-24 ರ ಮನಗೂಳಿ ರಸ್ತೆ ಬಸವಭವನ ಆವರಣದಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸುತ್ತಮುತ್ತಲಿನ ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿರುತ್ತಾರೆ.
ಶ್ರೀ ಸಿದ್ಧೇಶ್ವರ ಸಂಸ್ಥೆ, ಜೈನ್ ಫೌಂಡೇಶನ್ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಹಭಾಗಿತ್ವದಲ್ಲಿ ಆಕ್ಷಿಜನ್ ಹಾಗೂ ಸಾಮಾನ್ಯ ಬೆಡ್‍ಗಳನ್ನು ಹೊಂದಿದ ನಗರದ ಸೋಲಾಪೂರ ರಸ್ತೆಯ ಜೈನ್ ಕಾಲೇಜ ಕಟ್ಟಡದಲ್ಲಿ 100 ಬೆಡ್‍ಗಳನ್ನು ಹೊಂದಿದ ಕೊವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.
ಕೊವಿಡ್ ಕೇರ್ ಸೆಂಟರ್ ಬರುವಂತಹ ರೋಗಿಗಳಿಗೆ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಉಚಿತವಾಗಿ ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಊಟ ಸಾಯಂಕಾಲ ಅಲ್ಪೋಪಹಾರ ಮತ್ತು ರಾತ್ರಿ ಹೊತ್ತಿನ ಊಟ, ಬಿಸಿ ನೀರು, ಹಣ್ಣು ಹಂಪಲ ಕೊಡುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶ್ರೀ ಸಿದ್ಧೇಶ್ವರ ಸಂಸ್ಥೆಯ ಶ್ರೀ ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸಿಸ್ ಕೇಂದ್ರದಲ್ಲಿ 27 ಬೆಡ್‍ಗಳ ವೆಂಟಿಲೇಟರ್ ಒಳಗೊಂಡಂತಹ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಯನ್ನು ತೆರೆದಿದ್ದು ಸಾರ್ವಜನಿಕರಿಗೆ ನಿನ್ನೆಯಿಂದಲೇ ಸೇವೆ ಪ್ರಾರಂಭಿಸಲಾಗಿದೆ.
ನಗರದ ಎಲ್ಲ ಸಾರ್ವಜನಿಕರು ಸಹ ತಮ್ಮ ತಮ್ಮ ಮನೆಗಳಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿ, ಲಸಿಕೆ ಪಡೆದರೆ ಈ ರೋಗದಿಂದ ಆರೋಗ್ಯದಲ್ಲಿ ತೀರ್ವತರ ತೊಂದರೆಯಾಗುವದನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಆದ್ದರಿಂದ ತಪ್ಪದೆ ಸಲಿಕೆ ಪಡೆಯಿರಿ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಆರೋಗ್ಯ ಅಧಿಕಾರಿಗಳಾದ ಡಾ. ಬಾಲಕೃಷ್ಣ, ವಕೀಲರಾದ ಎಸ್.ಎಸ್.ಸಜ್ಜನ್, ಚಂದ್ರು ಚೌಧರಿ, ಮಡಿವಾಳ ಯಳವಾರ, ಪುಟ್ಟು ಸಾವಳಗಿ, ಕಲ್ಲು ಬಿರಾದಾರ, ರಾಚು ಬಿರಾದಾರ,ನಾನಾಗೌಡ ಕಳಸಗೊಂಡ, ಮಲ್ಲು ಹರಣಾಳ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ ಉಪಸ್ಥಿತರಿದ್ದರು.