ರಾಜ್ಯದಲ್ಲೂ ಲಸಿಕೆ ಕೊರತೆ: ಮೇ 1 ಅಭಿಯಾನ ಆರಂಭ ಅನುಮಾನ

ಬೆಂಗಳೂರು, ಏ. 29- ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ನಡುವೆ‌ ಮೇ ಒಂದರಿಂದ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಆಭಿಯಾನ ಆರಂಭಿಸುವುದು ಅನುಮಾನವಾಗಿದೆ.
ರಾಜ್ಯದಲ್ಲೂ ಲಸಿಕೆ ಆಭಾವ ಎದುರಿಗಾಗಿದೆ.‌
ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ‌ ರವಿಕುಮಾರ್ ನೀಡಿರುವ ಹೇಳಿಕೆ ಇದಕ್ಕೆ ಪುಷ್ಠಿ ದೊರೆತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸದ್ಯ ನಾವು ಈಗಾಗಲೇ 1 ಕೋಟಿ ಲಸಿಕೆ ಅರ್ಡರ್ ಮಾಡಿದ್ದೇವೆ. ಮೇ 1 ರಿಂದ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕು. ಆದರೆ, ಅರ್ಡರ್ ಮಾಡಿರೋ ಲಸಿಕೆ ಬಂದ ಮೇಲೆ ನಾವು ಲಸಿಕೆ ಅಭಿಯಾನವನ್ನು ಆರಂಭಿಸುತ್ತೇವೆ. ಸದ್ಯ ಈಗ ಇರುವ ಪರಿಸ್ಥಿತಿ ನೋಡಿದ್ರೆ 1 ನೇ ತಾರೀಖು ಲಸಿಕೆ ನೀಡೋದು ಅನುಮಾನ ವ್ಯಕ್ತವಾಗಿದೆ ರಾಜ್ಯಕ್ಕೆ ಲಸಿಕೆ ಲಭ್ಯವಾದ ಮೇಲೆ ಲಸಿಕೆ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆಯೂ ರಾಜ್ಯದಲ್ಲಿ 39 ಸಾವಿರ ಹೊಸ ಪ್ರಕರಣ ಹಾಗೂ 229 ಮಂದಿ ದಾಖಲೆ ಪ್ರಮಾಣದಲ್ಲಿ ಸಾವನ್ನಪ್ಪಿದ್ದರು.