ರಾಜ್ಯದಲ್ಲೂ ಕೊರೊನಾ ಹೊಸ ತಳಿ ಪತ್ತೆ

ಬೆಂಗಳೂರು,ಜ೪: ಚೀನಾದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಹೊಸ ತಳಿ ಬಿಎಫ್.೭ ವೈರಸ್‌ನ ಭೀತಿಯ ನಡುವೆಯೇ ಅಮೆರಿಕದಲ್ಲಿ ಆರ್ಭಟಿಸುತ್ತಿರುವ ಕೊರೊನಾ ಹೊಸ ರೂಪಾಂತರಿ ಎಕ್ಸ್‌ಬಿಬಿ೧.೫ ಉಪತಳಿ ಗುeರಾತ್, ರಾಜಸ್ತಾನದಲ್ಲಿ ಕಾಣಿಸಿಕೊಂಡ ನಂತರ ಕರ್ನಾಟಕದಲ್ಲೂ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.ಚೀನಾದಲ್ಲಿ ಕಾಣಿಸಿಕೊಂಡಿರುವ ಬಿಎಫ್.೭ ದೇಶದಲ್ಲಿ ಹರಡದಂತೆ ತಡೆಯಲು ಎಲ್ಲ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಓಮಿಕ್ರಾನ್‌ನ ರೂಪಾಂತರಿ ಎಕ್ಸ್‌ಬಿಬಿ೧.೫ ದೇಶದಲ್ಲಿ ಕಾಣಿಸಿಕೊಂಡಿದೆ.ಅಮೆರಿಕದಲ್ಲಿ ಎಕ್ಸ್‌ಬಿಬಿ೧.೫ ಉಪತಳಿ ಈಗಾಗಲೇ ಕಾಣಿಸಿಕೊಂಡಿದ್ದು, ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ಹಲವೆಡೆ ಸೋಂಕು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಿದೆ.ಈ ಕೊರೊನಾ ಉಪತಳಿ ಭಾರತದಲ್ಲಿ ಮೊದಲು ಗುಜರಾತಿನಲ್ಲಿ ಪತ್ತೆಯಾಗಿತ್ತು. ಈಗ ಕರ್ನಾಟಕದಲ್ಲಿ ಒಬ್ಬರಲ್ಲಿ ಎಕ್ಸ್‌ಬಿಬಿ೧.೫ ರೂಪಾಂತರಿ ತಳಿ ಪತ್ತೆಯಾಗಿದೆ. ಹಾಗೆಯೇ ರಾಜಸ್ತಾನದಲ್ಲೂ ಸೋಂಕು ತಗುಲಿರುವ ಕೊರೊನಾ ಸೋಂಕು ತಗುಲಿರುವ ಒಬ್ಬರಲ್ಲಿ ಇದು ಪತ್ತೆಯಾಗಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ.ಈ ಹೊಸ ರೂಪಾಂತರ ತಳಿ ಅತೀ ಶೀಘ್ರವಾಗಿ ಸೋಂಕು ಹರಡುವ ಗುಣ ಹೊಂದಿದ್ದು, ಹೆಚ್ಚು ಮಾರಣಾಂತಿಕ ಎಂದು ಹೇಳಲಾಗುತ್ತಿದೆ. ಅಮೆರಿಕದಲ್ಲಿ ಈ ತಳಿಯ ಬಗ್ಗೆ ಈಗಾಗಲೇ ಅಧ್ಯಯನಗಳನ್ನು ಹೊಂದಿದ್ದು, ಅಮೆರಿಕದ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಮತ್ತು ಆರೋಗ್ಯ ಇಲಾಖೆಯ ಮುಖ್ಯ ವಿಜ್ಞಾನಿ ಎರಿಕ್‌ಫೀಗಲ್‌ಡಿಂಗ್ ಶೀಘ್ರ ಹರಡುವ ಗುಣ ಹೊಂದಿರುವ ಕೊರೊನಾ ಹೊಸ ತಳಿ ಎಕ್ಸ್‌ಬಿಬಿ೧.೫ ಹೆಚ್ಚು ಅಪಾಯಕಾರಿ ಎಂದಿದ್ದು, ಕೊರೊನಾ ರೂಪಾಂತರದಲ್ಲೇ ಅತ್ಯಂತ ಕೆಟ್ಟ ರೂಪಾಂತರ ಎಕ್ಸ್‌ಬಿಬಿ೧.೫ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ, ಭಾರತದಲ್ಲಿ ಕಾಣಿಸಿಕೊಂಡಿರುವ ಈ ಕೊರೊನಾ ಎಕ್ಸ್‌ಬಿಬಿ೧.೫ ಹೊಸ ರೂಪಾಂತರಿ ತಳಿ ಹೆಚ್ಚು ಆತಂಕಕ್ಕೆ ಕಾರಣವಾಗಿದೆ.
ಭಾರತದಲ್ಲಿ ಓಮಿಕ್ರಾನ್ ಉಪತಳಿ ಬಿಎಫ್.೭ನ ತಡೆಯಲು ಹಲವು ಮುನ್ನೆಚ್ಚೆರಿಕೆ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿತ್ತು. ರಾಜ್ಯದಲ್ಲೂ ಥಿಯೇಟರ್, ಮಾಲ್, ಬಸ್, ಮೆಟ್ರೋಗಳಲ್ಲಿ ಮಾಸ್ಕ್‌ನ್ನು ಕಡ್ಡಾಯಗೊಳಿಸಲಾಗಿತ್ತು. ಈಗ ಮತ್ತೊಂದು ಕೊರೊನಾ ಉಪತಳಿ ಎಕ್ಸ್‌ಬಿಬಿ೧.೫ ಪತ್ತೆಯಾಗಿದೆ. ಇದರ ತಡೆಗೆ ಈಗ ಸರ್ಕಾರಗಳು ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ.