ರಾಜ್ಯದಲ್ಲಿ 514 ಸಾವು, 24036 ಮಂದಿ ಬಿಡುಗಡೆ, 18324 ಮಂದಿಗೆ ಹೊಸ ಸೋಂಕು

ಬೆಂಗಳೂರು, ಜೂ. 3–ರಾಜ್ಯದಲ್ಲಿಂದು ಕೂಡ ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು, ಇಂದು 514 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತರ ಸಂಖ್ಯೆ 30531ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಇಂದು ರಾಜ್ಯದಲ್ಲಿ ಆಸ್ಪತ್ರೆಯಿಂದ 24036 ಮಂದಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಬಿಡುಗಡೆ ಹೊಂದಿದವರ ಸಂಖ್ಯೆ 2336096ಕ್ಕೆ ಏರಿದೆ. ಒಟ್ಟು ಬಿಡುಗಡೆಉ ಸಂಖ್ಯೆ 2336096 ಹೆಚ್ಚಳವಾಗಿದೆ.
ಇಂದು 18324 ಮಂದಿಗೆ ಹೊಸ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 286798ಕ್ಕೆ ಹೆಚ್ವಳವಾಗಿದೆ ಎಂದು ಆರೋಗ್ಯ ಇಲಾಖೆ ವಿವರ ನೀಡಿದೆ.
ಬೆಂಗಳೂರು ನಗರದಲ್ಲಿ ಸಾವಿನ ಸಂಖ್ಯೆಯಲ್ಲಿ ಏರು ಮುಖದತ್ತ ಸಾಗಿದೆ, ನಿನ್ನೆಗಿಂತ ಹೆಚ್ಚು ಸಾವು ಸಂಭವಿಸಿದ್ದು 347 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ನಗರದಲ್ಲಿ ಮೃತರ ಸಂಖ್ಯೆ 14276ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಇಂದು 3533 ಮಂದಿಗೆ ಹೊಸ ಸೋಂಕು ತಗುಲಿದೆ.ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1174225 ಕ್ಕೆ ಹೆಚ್ಚಳವಾಗಿದೆ. ನಗರದಲ್ಲಿ 7672 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಬಿಡುಗಡೆಗೊಂಡವರ ಸಂಖ್ಯೆ 1025614 ಕ್ಕೆ ಏರಿಕೆಯಾಗಿದೆ . ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 134384ಕ್ಕೆ ಹೆಚ್ಚಳವಾಗಿದೆ ಆರೋಗ್ಯ ಇಲಾಖೆ ಎಂದು ಮಾಹಿತಿ ನೀಡಿದೆ.
ಸೋಂಕಿನ ಖಚಿತ ಪ್ರಕರಣಗಳ ಶೇಕಡವಾರು ಪ್ರಮಾಣ 12.20ರಷ್ಟಿದ್ದು, ಸಾವಿನ ಪ್ರಮಾಣ ಶೇ.2.80ರಷ್ಷಿದೆ ಎಂದು ಅಂಕಿ ಅಂಶ ನೀಡಿದೆ.
ಜಿಲ್ಲೆಗಳ ವಿವರ ಹೀಗಿದೆ:
ಬಾಗಲಕೋಟೆ 194, ಬಳ್ಳಾರಿ 503, ಬೆಳಗಾವಿ 839, ಬೆಂಗಳೂರು ಗ್ರಾಮಾಂತರ 760, ಬೆಂಗಳೂರು ನಗರ 3533, ಬೀದರ್ 27, ಚಾಮರಾಜನಗರ 313, ಚಿಕ್ಕಬಳ್ಳಾಪುರ ,486, ಚಿಕ್ಕಮಗಳೂರು 742, ಚಿತ್ರದುರ್ಗ 379_ ದಕ್ಷಿಣ ಕನ್ನಡ 598, ದಾವಣಗೆರೆ 559, ಧಾರವಾಡ 221, ಗದಗ 250, ಹಾಸನ 2078, ಹಾವೇರಿ 146, ಕಲಬುರಗಿ 119, ಕೊಡಗು 310, ಕೋಲಾರ 317, ಕೊಪ್ಪಳ 237, ಮಂಡ್ಯ 628, ಮೈಸೂರು 1573, ರಾಯಚೂರು 271, ರಾಮನಗರ 62, ಶಿವಮೊಗ್ಗ 767, ತುಮಕೂರು 979, ಉಡುಪಿ 580, ಉತ್ತರ ಕನ್ನಡ 588, ವಿಜಯಪುರ 192 ಮತ್ತು ಯಾದಗಿರಿಯಲ್ಲಿ 78 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.