ರಾಜ್ಯದಲ್ಲಿ 5 ದಿನ ಮಳೆ

ಬೆಂಗಳೂರು,ಜೂ.೨೧-ರಾಜ್ಯದಲ್ಲಿ ಇನ್ನೂ ಐದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಮಂಗಳವಾರ ಬೆಂಗಳೂರಿನಲ್ಲಿ ಒಂದು ಸೆಂ.ಮೀನಷ್ಟು ಮಳೆ ಸುರಿದಿದೆ.
ಮುಂದಿನ ವಾರಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಈ ವರ್ಷವೂ ವಾಡಿಕೆ ಮಳೆ ಆರಂಭವಾಗಿದ್ದರೂ ಬಿಪರ್ಜಾಯ್ ಪ್ರಭಾವದಿಂದ ತುಸು ವಿಳಂಬವಾಗಿದೆ.. ಚಂಡಮಾರುತವು ಕರಾವಳಿಯನ್ನು ದಾಟಿದ್ದು ದುರ್ಬಲವಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನದ ಜೊತೆಗೆ ಅಲ್ಪ-ಸ್ಪಲ್ಪ ಮಳೆಯಾಗುವ ಸಾಧ್ಯತೆಗಳಿವೆ.
ಸಮುದ್ರ ಮಟ್ಟದಿಂದ ೯೦೦ ಮೀಟರ್ ಎತ್ತರದಲ್ಲಿ, ತಮಿಳುನಾಡು ಭಾಗದಲ್ಲಿ ಚಂಡಮಾರುತ ಮತ್ತು ಬೈಫಾರ್ಜೋಯ್ ಪರಿಣಾಮ ಮಳೆಯಾಗಿದೆ.
ಜಿಲ್ಲಾವಾರು ಹವಾಮಾನ ವರದಿ
(ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)ಬೆಂಗಳೂರು: ೨೮-೨೧, ಮೈಸೂರು: ೨೮-೨೧, ಚಾಮರಾಜನಗರ: ೨೮-೨೧, ರಾಮನಗರ: ೨೯-೨೧, ಮಂಡ್ಯ: ೨೯-೨೨, ಬೆಂಗಳೂರು ಗ್ರಾಮಾಂತರ: ೨೮-೨೧, ಚಿಕ್ಕಬಳ್ಳಾಪುರ: ೨೯-೨೧, ಕೋಲಾರ: ೨೯-೨೨, ಹಾಸನ: ೨೭-೨೦, ಚಿತ್ರದುರ್ಗ: ೩೨-೨೨, ಚಿಕ್ಕಮಗಳೂರು: ೨೭-೧೯, ದಾವಣಗೆರೆ: ೩೪-೨೩, ಶಿವಮೊಗ್ಗ: ೩೦-೨೩, ಕೊಡಗು: ೨೪-೧೮, ತುಮಕೂರು: ೨೯-೨೨, ಉಡುಪಿ: ೩೦-೨೬ದಕ್ಷಿಣ ಕನ್ನಡ: ೨೯-೨೫, ಉತ್ತರ ಕನ್ನಡ: ೩೩-೨೩, ಧಾರವಾಡ: ೩೪-೨೩, ಹಾವೇರಿ: ೩೫-೨೪, ಹುಬ್ಬಳ್ಳಿ: ೩೩-೨೩, ಬೆಳಗಾವಿ: ೩೩-೨೨, ಗದಗ: ೩೬-೨೩, ಕೊಪ್ಪಳ: ೩೬-೨೪, ವಿಜಯಪುರ: ೩೮-೨೪, ಬಾಗಲಕೋಟ: ೩೮-೨೪ , ಕಲಬುರಗಿ: ೩೯-೨೭, ಬೀದರ್: ೩೭-೨೭, ಯಾದಗಿರಿ: ೩೮-೨೭, ರಾಯಚೂರ: ೩೮-೨೭, ಬಳ್ಳಾರಿ: ೩೭-೨೬