ರಾಜ್ಯದಲ್ಲಿ 491 ಸಾವು, 42444 ಜನ ಚೇತರಿಕೆ, 20628 ಮಂದಿಗೆ ಸೋಂಕು

ಬೆಂಗಳೂರು, ಮೇ.29-ರಾಜ್ಯದಲ್ಲಿ ಕೆಲ ದಿನಗಳಿಂದ ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು ಕೂಡ 42444 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ 2189064 ಮಂದಿ ಚೇತರಿಕೆ ಕಂಡಿದ್ದಾರೆ.
20628 ಜನರಿಗೆ ಹೊಸ ಸೋಂಕು ತಗುಲಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳು 350066 ಕ್ಕೆ ಏರಿಕೆಯಾಗಿದೆ.
ಆದರೆ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಇಳಿಕೆಯಾಗಿದ್ದ ಸಾವಿನ ಪ್ರಮಾಣ ಇಂದು ಮತ್ತೆ ಏರಿಕೆಯಾಗಿದ್ದು, ಒಂದೇ ದಿನ 491 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸತ್ತವರ ಸಂಖ್ಯೆ 28298 ಕ್ಕೆ ಏರಿಕೆಯಾಗಿದೆ. ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 25674496 ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಒದಗಿಸಿದೆ.
ಬೆಂಗಳೂರು ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು ಇಂದು ನಗರದಲ್ಲಿ 278 ಮಂದಿ ಮೃತಪಟ್ಟಿದ್ದಾರೆ ನಿನ್ನೆ 192 ಮಂದಿ ಸೋಂಕಿಗೆ ಬಲಿಯಾಗಿದ್ದರು. ಇದರೊಂದಿಗೆ ರಾಜ್ಯದಲ್ಲಿ
ಒಟ್ಡು ಮೃತರ ಸಂಖ್ಯೆ 12891 ಏರಿಕೆಯಾಗಿದೆ.
ಇಂದು 4889 ಮಂದಿಗೆ ಹೊಸ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 1154503ಕ್ಕೆ ಹೆಚ್ವಳವಾಗಿದೆ. ಇಂದು ನಗರದಲ್ಲಿ
ಇಂದು 21126 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರೊಂದಿಗೆ 977429 ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಸಕ್ರಿಯ ಪ್ರಕರಣಗಳು 164182ಕ್ಕೆ ಏರಿಕೆಯಾಗಿದೆ.
ಕೋವಿಡ್ -19 ಸೋಂಕಿನಿಂತ ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇ.2.38ರಷ್ಟಿದೆ.

ಜಿಲ್ಲೆಗಳ ವಿವರ ಹೀಗಿದೆ:
ಬಾಗಲಕೋಟೆ 166, ಬಳ್ಳಾರಿ 671, ಬೆಳಗಾವಿ 1,027, ಬೆಂಗಳೂರು ಗ್ರಾಮಾಂತರ 557, ಬೆಂಗಳೂರು ನಗರ 4,889, ಬೀದರ್ 42, ಚಾಮರಾಜನಗರ 365, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 843, ಚಿತ್ರದುರ್ಗ 763, ದಕ್ಷಿಣ ಕನ್ನಡ 923, ದಾವಣಗೆರೆ 449, ಧಾರವಾಡ 519, ಗದಗ 307, ಹಾಸನ 1,024, ಹಾವೇರಿ 194, ಕಲಬುರಗಿ 107, ಕೊಡಗು 333, ಕೋಲಾರ 684, ಕೊಪ್ಪಳ 350, ಮಂಡ್ಯ 453, ಮೈಸೂರು 1,720, ರಾಯಚೂರು 340, ರಾಮನಗರ 181, ಶಿವಮೊಗ್ಗ 972, ತುಮಕೂರು 1,102, ಉಡುಪಿ 984, ಉತ್ತರ ಕನ್ನಡ 536, ವಿಜಯಪುರ 210 ಮತ್ತು ಯಾದಗಿರಿಯಲ್ಲಿ 83 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.