ರಾಜ್ಯದಲ್ಲಿ 4.86ಕ್ಕೆ ಕುಸಿದ ಪಾಸೀಟಿವ್ ಪ್ರಮಾಣ; 25 ಲಕ್ಷ ದಾಟಿದ ಚೇತರಿಕೆ

ಬೆಂಗಳೂರು, ಜೂ.11- ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ. 4.86 ಕ್ಕೆ ಕುಸಿದಿದ್ದು ಇಲ್ಲಿಯ ತನಕ ಸೋಂಕಿನಿಂದ 25 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇಕಡಾ 5ಕ್ಕಿಂತ ಕಡಿಮೆ ದಾಖಲಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜೊತೆಗೆ ಸಾವು ಮತ್ತು ಸೋಂಕಿನ ಸಂಖ್ಯೆ ಗಣನೀಯವಾಗಿ ಕುಸಿದಿದೆ

ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 8,249 ಮಂದಿಗೆ ಸೋಂಕು ಕಾಣಿಸಿಕೊಂಡಿದೆ ಕಳೆದ ಹಲವು ದಿನಗಳ ಬಳಿಕ ಕಡಿಮೆ ಸೋಂಕು ದೃಡಪಟ್ಟಿದೆ.

ಇಂದು 14,975 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಜೊತೆಗೆ 159 ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿಂದು ಕುಸಿದ ಸಾವು,ಸೋಂಕು

 • ಹೊಸ ಪ್ರಕರಣ – 1154
 • ಚೇತರಿಕೆ – 4679
 • ಸಾವು – 48
 • ಒಟ್ಟು ಸೋಂಕು – 11,92,886
 • ಒಟ್ಟು ಚೇತರಿಕೆ – 10,85,862
 • ಒಟ್ಟು ಸಾವು – 15,263
 • ಸದ್ಯ ಸಕ್ರಿಯ ಪ್ರಕರಣ- 91,760

ರಾಜ್ಯದಲ್ಲಿ ಹೊಸದಾಗಿ ದಾಖಲಾಗಿರುವ ದಾಖಲಾರಿರುವ ಸೋಂಕು ಪ್ರಕರಣ ಸೇರಿದಂತೆ ಇಲ್ಲಿಯ ತನಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ 27,47,539 ಮಂದಿಗೆ ಸೋಂಕು ಏರಿಕೆಯಾಗಿದ್ದು ಇವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 25,11,105ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 32,644 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸದ್ಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,03,769ಕ್ಕೆ ಕುಸಿದಿದೆ. ಬೆಂಗಳೂರುನಲ್ಲಿಯೂ ಸೋಂಕು ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 1,69,695 ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಇರುವರೆಗೂ ಒಟ್ಟಾರೆಯಾಗಿ 3,13,63,615 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ

ಇಂದಿನ ಸೋಂಕು ಸಂಖ್ಯೆ

ಜಿಲ್ಲೆ ಎಷ್ಟು

 • ಬಾಗಲಕೋಟೆ- 73
 • ಬಳ್ಳಾರಿ – 189
 • ಬೆಳಗಾವಿ – 436
 • ಬೆಂಗಳೂರು ಗ್ರಾಮಾಂತರ- 234
 • ಬೆಂಗಳೂರು ನಗರ. – 1154
 • ಬೀದರ್ 9
 • ಚಾಮರಾಜನಗರ- 162
 • ಚಿಕ್ಕಬಳ್ಳಾಪುರ- 168
 • ಚಿಕ್ಕಮಗಳೂರು- 332
 • ಚಿತ್ರದುರ್ಗ- 123
 • ದಕ್ಷಿಣ ಕನ್ನಡ – 506
 • ದಾವಣಗೆರೆ- 260
 • ಧಾರವಾಡ- 217
 • ಗದಗ- 66
 • ಹಾಸನ- 733
 • ಹಾವೇರಿ- 65
 • ಕಲಬುರಗಿ- 29
 • ಕೊಡಗು- 189
 • ಕೋಲಾರ- 179
 • ಕೊಪ್ಪಳ- 98
 • ಮಂಡ್ಯ- 366
 • ಮೈಸೂರು- 817
 • ರಾಯಚೂರು- 61
 • ರಾಮನಗರ – 57
 • ಶಿವಮೊಗ್ಗ- 429
 • ತುಮಕೂರು- 576
 • ಉಡುಪಿ- 215
 • ಉತ್ತರ ಕನ್ನಡ- 311
 • ವಿಜಯಪುರ – 174
 • ಯಾದಗಿರಿ- 21