ರಾಜ್ಯದಲ್ಲಿ 364 ಸಾವು-22316 ಚೇತರಿಕೆ, 16068 ಜನರಿಗೆ ಸೋಂಕು

ಬೆಂಗಳೂರು, ಜೂ.4-ರಾಜ್ಯದಲ್ಲಿಂದು ಸಾವಿನ ಸಂಖ್ಯೆ ಕೊಂಚ ಇಳಿಕೆಯಾಗಿದ್ದು ಇಂದು ಒಂದೇ ದಿನ 364 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸತ್ತವರ ಸಂಖ್ಯೆ 30895 ಕ್ಕೆ ಹೆಚ್ಚಳವಾಗಿದೆ.
ಇಂದು ಒಂದೇ ದಿನ 22316 ಮಂದಿ ಚೇತರಿಕೆ ಕಂಡಿದ್ದಾರೆ. ಈ ಮೂಲಕ 2358412ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಂದೇ ದಿನ 16068 ಜನರಿಗೆ ಹೊಸ ಸೋಂಕು ತಗುಲಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 280186ಕ್ಕೆ ಏರಿಕೆಯಾಗಿದೆ. ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2669514 ಕ್ಕೆ ಹೆಚ್ವಳವಾಗಿದೆ ಎಂದು ಮಾಹಿತಿ ನೀಡಿದೆ.
ಸೋಂಕಿನ ಖಚಿತ ಪ್ರಕರಣಗಳ ಶೇಕಡವಾರು ಪ್ರಮಾಣ 10.66 ಹಾಗೂ ಮೃತಪಟ್ಟವರ ಶೇಕಡವಾರು ಪ್ರಮಾಣ 2.26ರಷ್ಟಿದೆ ಎಂದು ಅಂಕಿ ಅಂಶ ನೀಡಿದೆ.
ಬೆಂಗಳೂರು ನಗರದಲ್ಲಿಂದು ಸಾವಿನ ಪ್ರಮಾಣ ಇಳಿಕೆಯಾಗಿದ್ದು, ಇಂದು 206 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಗರದಲ್ಲಿ ಒಟ್ಟು ಮೃತರ ಸಂಖ್ಯೆ 14482ಕ್ಕೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 3221 ಮಂದಿಗೆ ಹೊಸ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1177494 ಏರಿಕೆಯಾಗಿದೆ.
ಇಂದು ಬಿಡುಗಡೆಯಾದವರ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದ್ದು ಇಂದು ಒಂದೇ ದಿನ 6220 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 1031834 ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 131179 ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಪ್ರಕರಣಗಳ ವಿವರ:
ಬಾಗಲಕೋಟೆ 208,ಬಳ್ಳಾರಿ ,423, ಬೆಳಗಾವಿ 792,
ಬೆಂಗಳೂರು ಗ್ರಾಮಾಂತರ 429,
ಬೆಂಗಳೂರು ನಗರ 3,221, ಬೀದರ್ 19,
ಚಾಮರಾಜನಗರ 296,ಚಿಕ್ಕಬಳ್ಳಾಪುರ 400,
ಚಿಕ್ಕಮಗಳೂರು 595,ಚಿತ್ರದುರ್ಗ 702, ದಕ್ಷಿಣಕನ್ನಡ 806, ದಾವಣಗೆರೆ 620,
ಧಾರವಾಡ 235,ಗದಗ 194,ಹಾಸನ 974
ಹಾವೇರಿ 100*ಲ,ಕಲಬುರಗಿ 46,ಕೊಡಗು 388,
ಕೋಲಾರ 304,ಕೊಪ್ಪಳ 299,ಮಂಡ್ಯ 526,
ಮೈಸೂರು 1,265,ರಾಯಚೂರು 184,
ರಾಮನಗರ 146, ಶಿವಮೊಗ್ಗ 636, ತುಮಕೂರು 857, ಉಡುಪಿ 561, ಉತ್ತರಕನ್ನಡ 559,
ವಿಜಯಪುರ 190, ಯಾದಗಿರಿ 93 ಪ್ರಕರಣಗಳು ದಾಖಲಾಗಿವೆ