ರಾಜ್ಯದಲ್ಲಿ 33,733 ಮಂದಿಗೆ ಸೋಂಕು 217 ಜನರ ಸಾವು

ಬೆಂಗಳೂರು, ಮೇ 2- ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ತುಸು ಇಳಿಕೆ ಕಂಡಿದೆ. ಇಂದು 33,733 ಮಂದಿಗೆ ಹೊಸ ಸೋಂಕು ತಗುಲಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದ್ದು 217 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 21119 ಜನರಿಗೆ ಸೋಂಕು ತಗುಲಿದ್ದು 64 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಕೋವಿಡ್ ನಿಂದ ಒಟ್ಟು ಮೃತರ ಸಂಖ್ಯೆ 16011ಕ್ಕೆ ಏರಿದೆ. ಇಂದು ಆಸ್ಪತ್ರೆಯಿಂದ 21149 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ 1164398 ಮಂದಿ ಬಿಡುಗಡೆ ಹೊಂದಿದ್ದಾರೆ. ಒಟ್ಡು ಸಕ್ರಿಯ ಪ್ರಕರಣಗಳ ಸಂಖ್ಯೆ 421436 ಕ್ಜೆ ಏರಿಕೆಯಾಗಿದೆ.
ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 1601865 ಕ್ಕೆ ಹೆಚ್ವಳವಾಗಿದೆ.
ಬಾಗಲಕೋಟೆ 691, ಬಳ್ಳಾರಿ 1156, ಬೆಳಗಾವಿ 372, ಬೆಂಗಳೂರು ಗ್ರಾಮಾಂತರ 285, ಬೆಂಗಳೂರು ನಗರ 21199 ಬೀದರ್ 584, ಚಾಮರಾಜನಗರ 271, ಚಿಕ್ಕಬಳ್ಳಾಪುರ 441,, ಚಿಕ್ಕಮಗಳೂರು _166, ಚಿತ್ರದುರ್ಗ 152, ದಕ್ಷಿಣ ಕನ್ನಡ 996, ದಾವಣಗೆರೆ 317, ಧಾರವಾಡ 741, ಗದಗ 118, ಹಾಸನ 792, ಹಾವೇರಿ 157, ಕಲಬುರಗಿ 427,
ಕೊಡಗು 246,, ಕೋಲಾರ 282, ಕೊಪ್ಪಳ 567, ಮಂಡ್ಯ 653, ಮೈಸೂರು 2750 ರಾಯಚೂರು 445, ರಾಮನಗರ 441, ಶಿವಮೊಗ್ಗ 620, ತುಮಕೂರು 1,302, ಉಡುಪಿ 413, ಉತ್ತರ ಕನ್ನಡ 538, ವಿಜಯಪುರ 303, ಮತ್ತು ಯಾದಗಿರಿಯಲ್ಲಿ 302 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.