ರಾಜ್ಯದಲ್ಲಿ 1704 ಮಂದಿಗೆ ಸೋಂಕು: 13 ಮಂದಿ ಬಲಿ

ಬೆಂಗಳೂರು ನ. 22–ರಾಜ್ಯದಲ್ಲಿ ಕೊರೊನಾ ಸೋಂಕು ಇಂದು ಕೂ ಇಳಿಕೆಯತ್ತ ಸಾಗಿದ್ದು, ರಾಜ್ಯದಲ್ಲಿ 1704ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. 1537 ಮಂದಿಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು 13 ಮಂದಿ ವೈರಾಣುವಿಗೆ ಬಲಿಯಾಗಿದ್ದಾರೆ. ಇದು ರಾಜ್ಯದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ರಾಜ್ಯದಲ್ಲಿ ಇದುವರೆಗೆ 8,36,505 ಬಿಡುಗಡೆ ಹೊಂದಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ರಾಜ್ಯದಲ್ಲಿ ಒಟ್ಟು 24,868 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿಗೆ ಇದುವರೆಗೆ 11654 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಅಂಕಿ ಅಂಶ ನೀಡಿದೆ. ಒಟ್ಟು 8,73,046ಖಚಿತ ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ 470 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು 10 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 1039 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಸೋಂಕಿನ ಸಂಖ್ಯೆ 363665ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ಒಟ್ಟು 3,41,424 ಆಸ್ಪತ್ರೆಯಿಂದು ಬಿಡುಗಡೆಯಾಗಿದ್ದಾರೆ. ಒಟ್ಟಾರೆ ನಗರದಲ್ಲಿ 18,172 ಸಕ್ರಿಯ ಪ್ರರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 4, ಬಳ್ಳಾರಿ 22, ಬೆಳಗಾವಿ 32, ಬೆಂಗಳೂರು ಗ್ರಾಮಾಂತರ 41, ,ಬೀದರ್ 6, ಚಾಮರಾಜನಗರ 16, ಚಿಕ್ಕಬಳ್ಳಾಪುರ 7,, ಚಿಕ್ಕಮಗಳೂರು 11, ಚಿತ್ರದುರ್ಗ 18, ದಕ್ಷಿಣ ಕನ್ನಡ 46,;ದಾವಣಗೆರೆ 24, ಧಾರವಾಡ 12, ಗದಗ 10, ಹಾಸನ 44, ಹಾವೇರಿ 25, ಕಲಬುರಗಿ 12, ಕೊಡಗು 10, ಕೋಲಾರ 14, ಕೊಪ್ಪಳ 21, ಮಂಡ್ಯ 32, ಮೈಸೂರು 100, ರಾಯಚೂರು 32, ರಾಮನಗರ 9, ಶಿವಮೊಗ್ಗ 21, ತುಮಕೂರು 14, ಉಡುಪಿ 23, ಉತ್ತರ ಕನ್ನಡ 23, ವಿಜಯಪುರ 27,ಯಾದಗಿರಿ ಜಿಲ್ಲೆಯಲ್ಲಿ 9 ಸೋಂಕು ಪ್ರಕರಣಗಳು ದಾಖಲಾಗಿವೆ.