ರಾಜ್ಯದಲ್ಲಿ 10 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ ಇಂದು 4234 ಜನರಿಗೆ ಸೋಂಕು, 18ಸಾವು

ಬೆಂಗಳೂರು, ಏ.1- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹತ್ತು ಲಕ್ಷ ಗಡಿದಾಟಿದೆ. ಕೊರೋನಾ ಕಾಣಿಸಿಕೊಂಡ ಒಂದು ವರ್ಷದ ನಂತರ ಸೋಂಕು ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 10 ಲಕ್ಷ ತಲುಪಿದೆ. ಇವರಲ್ಲಿ9 ಲಕ್ಷ57ಸಾವಿರದ769 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಇಂದೂ ಕೊರೊನಾ ಬಾರಿ ಏರಿಕೆಯಾಗಿದ್ದು ಸತತ ಎರಡನೇ ದಿನವೂ ಸೋಂಕಿತರ ಸಂಖ್ಯೆ ನಾಲ್ಕುಸಾವಿರ ಗಡಿದಾಟಿದೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಮೂರು ಸಾವಿರ ಸನಿಹದಲ್ಲಿದೆ.

ಕಳೆದ 24 ಗಂಟೆಗಳಲ್ಲಿ 18 ಮಂದಿ ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ದಲ್ಲಿ 11 ಮಂದಿ ಧಾರವಾಡದಲ್ಲಿ ಇಬ್ಬರು ಕಲ್ಬುರ್ಗಿ, ಬೀದರ್, ಮಂಡ್ಯ ಮೈಸೂರು ಹಾಗೂ ತುಮಕೂರಿನ ಲ್ಲಿ ತಲಾ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30 ಸಾವಿರ ಗಡಿದಾಟಿದೆ.

ಇಂದು ರಾಜ್ಯದಲ್ಲಿ4234 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು1599ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ18 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1001238ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು957769 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 30865 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12585 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 265 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 2906 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 437733ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 11 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ4630ಕ್ಕೆ ಏರಿಕೆಯಾಗಿದೆ.
ಇಂದು719 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ411313 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು21789 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 19, ಬಳ್ಳಾರಿ 25, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 73, ಬೀದರ್ 218, ಚಾಮರಾಜನಗರ 17, ಚಿಕ್ಕಬಳ್ಳಾಪುರ 08, ಚಿಕ್ಕಮಗಳೂರು 51, ಚಿತ್ರದುರ್ಗ 28, ದಕ್ಷಿಣ ಕನ್ನಡ 30, ದಾವಣಗೆರೆ 17, ಧಾರವಾಡ 57, ಗದಗ 15, ಹಾಸನ 67, ಹಾವೇರಿ 04, ಕಲಬುರಗಿ 144, ಕೊಡಗು 23, ಕೋಲಾರ 31, ಕೊಪ್ಪಳ 09, ಮಂಡ್ಯ 67, ಮೈಸೂರ 109, ರಾಯಚೂರು 21, ರಾಮನಗರ 03, ಶಿವಮೊಗ್ಗ 24, ತುಮಕೂರು 102, ಉಡುಪಿ 53, ಉತ್ತರ ಕನ್ನಡ 44, ವಿಜಯಪುರ 18, ಯಾದಗಿರಿ 05.