ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ: ಖಂಡ್ರೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೨೭:ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರಖಂಡ್ರೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಹುಲಿ ದಿನಕ್ಕೆ ಎರಡು ದಿನಗಳ ಮುನ್ನ ಹುಲಿ ಗಣತಿಯ ವಿವರಗಳನ್ನು ಬಿಡುಗಡೆ ಮಾಡಿರುವ ಅವರು, ೨೦೧೮ರಲ್ಲಿ ನಡೆದಿದ್ದ ಅಖಿಲ ಭಾರತ ಹುಲಿ ಗಣತಿಯ ಸಂದರ್ಭದಲ್ಲಿ ಕ್ಯಾಮರಾ ಟ್ರಾಕ್‌ನಲ್ಲಿ ೪೦೪ ಹುಲಿಗಳು ಪತ್ತೆಯಾಗಿದ್ದವು. ಇದನ್ನು ವನ್ಯಜೀವಿ ಸಂಖ್ಯಾಶಾಸ್ತ್ರದ ಪ್ರಕಾರ ವಿಶ್ಲೇಷಿಸಿದಾಗ ರಾಜ್ಯದಲ್ಲಿ ೪೭೫ ರಿಂದ ೫೭೩ ಹುಲಿಗಳು ಇರಬಹುದು ಎಂದು ವಿಶ್ಲೇಷಿಸಲಾಗಿತ್ತು.೨೦೨೨ರಲ್ಲಿ ರಾಜ್ಯದಲ್ಲಿ ೪೩೫ ಹುಲಿಗಳು ಪತ್ತೆಯಾಗಿದ್ದು, ಈ ವರ್ಷ ಹುಲಿಗಳ ಸಂಖ್ಯೆ ಇನ್ನೂ ಹೆಚ್ಚು ಆಗಬಹುದು. ಈ ಬಗ್ಗೆ ವಿಶ್ಲೇಷಣೆ ನಡೆದಿದೆ. ನಂತರ ಹುಲಿ ಸಂಖ್ಯೆ ಎಷ್ಟು ಹೆಚ್ಚು ಆಗಿದೆ ಎಂಬುದು ಗೊತ್ತಾಗಲಿದೆ ಎಂದರು.ಹುಲಿ ಸಂರಕ್ಷಣೆಗೆ ರಾಜ್ಯಸರ್ಕಾರ ಕೈಗೊಂಡ ಉಪಕ್ರಮಗಳಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದವರು ಹೇಳಿದರು.ಮಾರ್ಗಸೂಚಿಯ ಪ್ರಕಾರ ಪ್ರತಿ ೪ ವರ್ಷಗಳಿಗೊಮ್ಮೆ ಹುಲಿಗಣತಿ ಮಾಡಲಾಗುತ್ತದೆ. ಪಶ್ಚಿಮಘಟ್ಟ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕವೂ ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ೨೦೨೧-೨೨ರ ಅವಧಿಯಲ್ಲಿ ಹುಲಿ ಹಣತಿಯನ್ನು ವೈಜ್ಞಾನಿಕವಾಗಿ ಸಮರ್ಪಕವಾಗಿ ನಡೆಸಿದೆ. ರಾಜ್ಯದ ೫ ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರ, ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ, ಕಾಳಿಕಾನನ ಸೇರಿದಂತೆ ಒಟ್ಟು ೩೭ ವನ್ಯಜೀವಿ ಧಾಮಗಳಲ್ಲಿ ಹುಲಿ ಗಣತಿ ನಡೆಸಲಾಗಿದೆ. ಈ ಗಣತಿಗೆ ಕ್ಯಾಮರಾ ಟ್ರಾಕ್ ಮತ್ತು ಲೈನ್ ಟ್ರಾನ್ಯಾಕ್ಟ್ ವಿಧಾನ ಬಳಸಲಾಗಿದೆ ಎಂದರು.ರಾಜ್ಯದ ಎಲ್ಲ ಸಂರಕ್ಷಿತರಣ್ಯಗಳಲ್ಲಿ ಅಳವಡಿಸಲಾಗಿದ್ದ ೫೩೯೯ ಕ್ಯಾಮರಾ ಟ್ರಾಕ್‌ನಲ್ಲಿ ೬೬ ಲಕ್ಷಕ್ಕೂ ಹೆಚ್ಚು ವನ್ಯಜೀವಿಗಳ ಛಾಯಾಚಿತ್ರ ಕ್ರೂಢೀಕರಣವಾಗಿದ್ದು, ಹುಲಿಗಳ ಚಲನ-ವಲನ ಟೆರಿಟೆರಿ ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಹುಲಿ ಸಂಖ್ಯೆಯನ್ನು ಲೆಕ್ಕ ಹಾಕಲಾಗಿದೆ ಎಂದು ವಿವರ ನೀಡಿದರು.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ೬೧೨, ಭದ್ರಾದಲ್ಲಿ ೩೩೦, ಬಿಆರ್‌ಟಿಯಲ್ಲಿ ೨೮೮, ಕಾಳಿಯಲ್ಲಿ ೪೪೮, ನಾಗರಹೊಳೆಯಲ್ಲಿ ೫೦೨, ಕ್ಯಾಮರಾಪಾಯಿಂಟ್ ಅಳವಡಿಸಲಾಗಿತ್ತು. ಇದರಲ್ಲಿ ೩೭೬ ಹುಲಿಗಳು ಸೆರೆಯಾಗಿವೆ. ಇದಲ್ಲದೆ ರಾಜ್ಯದ ಎಲ್ಲ ಅರಣ್ಯದಲ್ಲೂ ಒಟ್ಟಾರೆ ೪,೭೮೬ ಕ್ಯಾಮರಾ ಪಾಯಿಂಟ್ ಇದ್ದು ಪ್ರಾಣಿಗಳ ಚಿತ್ರವನ್ನು ಸೆರೆ ಹಿಡಿಂiiಲಾಗಿದೆ ಎಂದರು.
ದೇಶದಲ್ಲಿ ಅರಣ್ಯ ಸುರಕ್ಷಿತವಾಗಿ ಉಳಿಯುವುದಕ್ಕೆ ದೇಶದ ಪ್ರಧಾನಮಂತ್ರಿಗಳಾಗಿದ್ದ ದಿ. ಇಂದಿರಾಗಾಂಧಿ ಮತ್ತು. ದಿ. ರಾಜೀವ್‌ಗಾಂಧಿಯವರೇ ಕಾರಣ ಎಂದರೆ ತಪ್ಪಾಗಲಾರದರು. ಇವರುಗಳ ಅಧಿಕಾರವಧಿಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ, ಅರಣ್ಯ ಹಕ್ಕು ಕಾಯ್ದೆ ಇವುಗಳನ್ನು ಜಾರಿಗೆ ತಂದವರು ಇವರಿಂದ ಅರಣ್ಯ ವನ್ಯಜೀವಿ ಹಾಗೂ ಅರಣ್ಯ ವಾಸಿಗಳಿಗೆ ಅನುಕೂಲವಾಯಿತು ಎಂದು ಹೇಳಿದರು.