ರಾಜ್ಯದಲ್ಲಿ ಹತ್ಯೆಗಳ ಮೂಲಕ ಅಶಾಂತಿ ಸೃಷ್ಟಿ; ಎಬಿವಿಪಿ ಪ್ರತಿಭಟನೆ

ದಾವಣಗೆರೆ.ಜು.೩೧;ಹತ್ಯೆಗಳ ಮೂಲಕ ಅಶಾಂತಿ ನಿರ್ಮಿಸುತ್ತಿರುವ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯದಲ್ಲಿ ಸರಣಿ ಕೊಲೆ ಪ್ರಕರಣಗಳು ನಡೆಯುತ್ತಿದ್ದು, ಸಮಾಜದಲ್ಲಿ ನಾಗರೀಕರು ಭಯಪಟ್ಟು ಬದುಕುವಂತಹ ವಾತಾವರಣ ನಿರ್ಮಾಣವಾಗುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರವೀಣ ನೆಟ್ಟಾರು ಕೊಲೆ ಹಾಗೂ ಹಿಂದಿನ ಕೊಲೆ ಸರಣಿಗಳ ಹಿಂದೆ ಅನೇಕ, ಸಂಘಟನೆಗಳ ಬೆಂಬಲ ಇರುವುದು ಎಲ್ಲ ಪ್ರಕರಣಗಳಲ್ಲಿ ಕಂಡು ಬರುತ್ತಿದ್ದು, ಸರ್ಕಾರವು ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕೆಂದು ಸರ್ಕಾರಕ್ಕೆ ಮನವಿ  ಮಾಡಿದರು. ಈ ಸಂದರ್ಭದಲ್ಲಿ ಮಂಜುನಾಥ ಕೊಳ್ಳೇರ ವಿಭಾಗ ಸಂಘಟನಾ ಕಾರ್ಯದರ್ಶಿ, ತಿಪ್ಪೇಶ್ ನಗರ ಸಹ ಕಾರ್ಯದರ್ಶಿ, ಅಜಯ್, ಅಲೋಕ್, ಶಶಾಂಕ್, ಚಿರು ಇನ್ನಿತರರು ಹಾಜರಿದ್ದರು.

Attachments area