ರಾಜ್ಯದಲ್ಲಿ ಸೋಂಕು, ಸಾವಿನ ಸಂಖ್ಯೆ ಇಳಿಕೆ

ಬೆಂಗಳೂರು, ನ.19 -ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇಳಿಕೆಯಾಗಿದೆ.

ರಾಜ್ಯದಲ್ಲಿ ಇಂದು 242 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 4ಸೋಂಕಿತರು ಸಾವನ್ನಪ್ಪಿದ್ದು. ಈ ಅವಧಿಯಲ್ಲಿ 329 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ರಾಜ್ಯದ ಬಾಗಲಕೋಟೆ, ಬೆಳಗಾವಿ, ಬೀದರ್,ದಾವಣಗೆರೆ ,ಕಲಬುರಗಿ, ಕೊಲಾರ,ಕೊಪ್ಪಳ,ಮಂಡ್ಯ ರಾಯಚೂರು ಮತ್ತು ರಾಮನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಂಖ್ಯೆ ಪತ್ತೆಯಾಗಿಲ್ಲ.

ರಾಜಧಾನಿಯಲ್ಲಿ ಕೊರೊನಾ ಸೋಂಕು ಪ್ರಕರಣ ಇಂದು 179 ಮಂದಿಗೆ ಇಳಿಕೆಯಾಗಿದೆ. 236 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.ಇಂದು 2 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,93, 139 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,47,683 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38165 ಕ್ಕೆ ಏರಿಕೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 7,258 ಕ್ಕೆ ಕುಸಿದಿದೆ.

ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರಮಾಣ ಶೇ.1.65 ಕ್ಕೆ ಇಳಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 0..26ರಷ್ಟು ಇದೆ.

89ಸಾವಿರ ಪರೀಕ್ಷೆ:

ರಾಜ್ಯದಲ್ಲಿ ಇಂದು 89,715ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,25,16,515 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

  • ಬಾಗಲಕೋಟೆ- 0
  • ಬಳ್ಳಾರಿ – 0
  • ಬೆಳಗಾವಿ – 2
  • ಬೆಂಗಳೂರು ಗ್ರಾಮಾಂತರ- 2
  • ಬೆಂಗಳೂರು ನಗರ. – 144
  • ಬೀದರ್ 0
  • ಚಾಮರಾಜನಗರ- 3
  • ಚಿಕ್ಕಬಳ್ಳಾಪುರ- 0
  • ಚಿಕ್ಕಮಗಳೂರು- 3
  • ಚಿತ್ರದುರ್ಗ- 3
  • ದಕ್ಷಿಣ ಕನ್ನಡ – 12
  • ದಾವಣಗೆರೆ- 0
  • ಧಾರವಾಡ- 7
  • ಗದಗ- 1
  • ಹಾಸನ- 11
  • ಹಾವೇರಿ- 0
  • ಕಲಬುರಗಿ- 1
  • ಕೊಡಗು- 11
  • ಕೋಲಾರ- 0
  • ಕೊಪ್ಪಳ- 0
  • ಮಂಡ್ಯ- 5
  • ಮೈಸೂರು- 5
  • ರಾಯಚೂರು- 0
  • ರಾಮನಗರ – 0
  • ಶಿವಮೊಗ್ಗ- 1
  • ತುಮಕೂರು- 14
  • ಉಡುಪಿ- 5
  • ಉತ್ತರ ಕನ್ನಡ- 10
  • ವಿಜಯಪುರ – 1
  • ಯಾದಗಿರಿ- 1