ರಾಜ್ಯದಲ್ಲಿ ಸೋಂಕು ,ಸಾವಿನ ಸಂಖ್ಯೆ ತುಸು ಇಳಿಕೆ

ಬೆಂಗಳೂರು, ಸೆ.1- ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇಂದು ತುಸು ಇಳಿಕೆಯಾಗಿದೆ.

ರಾಜ್ಯದಲ್ಲಿ ಇಂದು 1,159 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 21 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 1112 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ

ಬೀದರ್, ಹಾವೇರಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.66 ಕ್ಕೆ ಕುಸಿದಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ 1.81ಕ್ಕೆ ಇಳಿಕೆಯಾಗಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18,412 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,50,604 ಕ್ಕೆ ಏರಿಕೆಯಾಗಿದೆ ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 28,94,827 ಕ್ಕೆ ಹೆಚ್ಚಳವಾಗಿದೆ.

ಸೋಂಕಿನಿಂದ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 37,318 ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಏರಿಕೆ

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಏರಿಕೆಯಾಗಿದೆ .ಇಂದು 359 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು 7 ಮಂದಿ ಮೃತಪಟ್ಡಿದ್ದಾರೆ. ಜೊತೆಗೆ ,232 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

1,75, ಲಕ್ಷ ಪರೀಕ್ಷೆ

ರಾಜ್ಯದಲ್ಲಿ ಇಂದು 1,75,371 ಮಂದಿ್ಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ 4,36,49,857 ಕ್ಕೆ ಹೆಚ್ಚಳವಾಗಿದೆ.

ಇಂದಿನ ಸೋಂಕು ಸಂಖ್ಯೆ

ಜಿಲ್ಲೆ ಎಷ್ಟು

  • ಬಾಗಲಕೋಟೆ – 2
  • ಬಳ್ಳಾರಿ – 6
  • ಬೆಳಗಾವಿ -1
  • ಬೆಂಗಳೂರು ಗ್ರಾಮಾಂತರ- 9
  • ಬೆಂಗಳೂರು ನಗರ. – 359
  • ಬೀದರ್ -0
  • ಚಾಮರಾಜನಗರ – 9
  • ಚಿಕ್ಕಬಳ್ಳಾಪುರ – 2
  • ಚಿಕ್ಕಮಗಳೂರು- 48
  • ಚಿತ್ರದುರ್ಗ – 7
  • ದಕ್ಷಿಣ ಕನ್ನಡ – 191
  • ದಾವಣಗೆರೆ -8
  • ಧಾರವಾಡ -8
  • ಗದಗ – 4
  • ಹಾಸನ – 81
  • ಹಾವೇರಿ – 0
  • ಕಲಬುರಗಿ- 5
  • ಕೊಡಗು – 92
  • ಕೋಲಾರ -32
  • ಕೊಪ್ಪಳ -3
  • ಮಂಡ್ಯ – 21
  • ಮೈಸೂರು -91
  • ರಾಯಚೂರು -0
  • ರಾಮನಗರ -1
  • ಶಿವಮೊಗ್ಗ – 11
  • ತುಮಕೂರು -34
  • ಉಡುಪಿ – 91
  • ಉತ್ತರ ಕನ್ನಡ – 37
  • ವಿಜಯಪುರ – 4
  • ಯಾದಗಿರಿ- 0